Ticker

6/recent/ticker-posts

*ಮಕ್ಕಳು ಶಾಲಾ ಓದಿನ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು: ಸಚಿವ ಚೆಲುವರಾಯಸ್ವಾಮಿ*


 ಗುರು ಶಿಷ್ಯರ ಬಾಂಧವ್ಯ ಸಮಾಜದ ಭವಿಷ್ಯ ನಿರ್ಮಾಣದ ಆಧಾರಸ್ತಂಭ 
 
 ನಾಗಮಂಗಲ.ಸೆ :-6 ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡುವುದರ ಜೊತೆಗೆ ಉತ್ತಮ ನಾಗರಿಕರನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ವ್ಯಾಸಂಗದ ಅವಧಿಯಲ್ಲಿ ಉತ್ತಮಶಿಕ್ಷಣಮೌಲ್ಯಧಾರಿತ ಮಾನವೀಯ ಮೌಲ್ಯ ಶಿಸ್ತು ಜವಾಬ್ದಾರಿ ಸಾಮಾಜಿಕ ಕಾಳಜಿಯನ್ನು ಬೆಳೆಸುವ ಮಾತ್ರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

 ವ್ಯಾಸಂಗದ ಅವಧಿಯಲ್ಲಿ ಮಕ್ಕಳು ತಮ್ಮ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ,  ದೇಶ, ರಾಜ್ಯ, ನಾಡು ನುಡಿಗೆ ಹೆಚ್ಚಿನ ಗಮನವನ್ನು ನೀಡಿದರೆ ಸಾಧನೆಗೆ ಬದಲಾವಣೆಯಾಗಲು ಸಾಧ್ಯ ಎಂದು ತಿಳಿಸಿದರು
ಮಂಡ್ಯ ಜಿಲ್ಲೆಯ ಪರೀಕ್ಷೆಗಳಲ್ಲಿ 10,  15, 20ನೇ ಸ್ಥಾನದಲ್ಲಿ ಇರುತ್ತಿತ್ತು. ಇಂದು ನಮ್ಮ ಮಂಡ್ಯ ಜಿಲ್ಲೆಯು 5ನೇ ಸ್ಥಾನಕ್ಕೆ ಬಂದಿದ್ದು ಇದು ನಮ್ಮೆಲ್ಲ ಶಿಕ್ಷಕರು ಮತ್ತು ಮಕ್ಕಳ ಶ್ರಮವೆಯಾಗಿದೆ. ಇದರಿಂದ ನಮ್ಮ ಮಕ್ಕಳ ಓದಿನ ಕಡೆಗೆ ನಾವು ಹೆಚ್ಚಿನ ಗಮನವನ್ನು ನೀಡುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ಡಿಕೆ ಶಿವಕುಮಾರ್ ರವರ ನೇತೃತ್ವದ ನಮ್ಮ ಕರ್ನಾಟಕ ರಾಜ್ಯದ ಸರ್ಕಾರವು ಶಿಕ್ಷಣಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ, ಮಕ್ಕಳ ಭವಿಷ್ಯಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಶಿಕ್ಷಕರುಗಳು ನಿಮಗೆ ಸಲ್ಲಬೇಕಾದ ಎಲ್ಲವನ್ನು ನಾವುಪೂರೈಸುತ್ತಿರುವುದರಿಂದ ಹೆಚ್ಚಿನ ಶ್ರಮವಹಿಸಿ ಮಕ್ಕಳ ಶಿಕ್ಷಣವನ್ನ ಉತ್ತಮ ಪಡಿಸಬೇಕು ಎಂದು ಕರೆ ನೀಡಿದರು. 

 ಇದೇ ಸಂದರ್ಭದಲ್ಲಿ ನಿವೃತ್ತರಾದ 45 ಶಿಕ್ಷಕರು ಹಾಗೂ ಪ್ರತಿಭಾವಂತ 450 ಮಕ್ಕಳಿಗೆಸನ್ಮಾನಿಸಲಾಯಿತು. 

ಸಮಾರಂಭದಲ್ಲಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಸಚಿನ್ ಚೆಲುವರಾಯಸ್ವಾಮಿ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ತಾಲೂಕು ಸೊಸೈಟಿ ಅಧ್ಯಕ್ಷರಾದ ಬಿಎಮ್ ಪ್ರಕಾಶ್, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು, ಬಸವರಾಜು. ಡಯಟ್ ಪ್ರಾಂಶುಪಾಲರಾದ ಯೋಗೇಶ್.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ ನಾಗೇಶ್ ತಾಲೂಕು ಘಟಕದ ಅಧ್ಯಕ್ಷ ಜೆ ವೈ.ಮಂಜುನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ಆರ್ ಲೋಕೇಶ್ ಕ್ಷೇತ್ರ ಸಮನ್ವಯಾಧಿಕಾರಿ ರವೀಶ್ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್ ಹಾಗೂ ಅನೇಕ ಮುಖಂಡರು ಗಣ್ಯರು ಉಪಸ್ಥಿತರಿದ್ದರು