Ticker

6/recent/ticker-posts

*2,000 ಕೋಟಿ ಬರ ಅನುದಾನ ಬಿಡುಗಡೆಗೆ ಜನವಾದಿ ಮಹಿಳಾ ಸಂಘಟನೆ ಒತ್ತಾಯ*

ನಾಗಮಂಗಲ:-ಸೆ 8ರಾಜ್ಯ ಸರ್ಕಾರ ಬರ ಘೋಷಣೆ ಮಾಡಿರುವ ಮಂಡ್ಯ ಜಿಲ್ಲೆಗೆ 2ಸಾವಿರ ಕೋಟಿ ಅನುದಾನ ನೀಡಬೇಕು ಸಂಕಷ್ಟದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಜನವಾದಿ ಮಹಿಳಾ ಸಂಘಟನಾ ಕಾರ್ಯಕರ್ತರು ಆಗ್ರಹಿಸಿ ತಾಲೂಕು ದಂಡಾಧಿಕಾರಿ ಅಶೋಕ್ ರವರಿಗೆ ಮನವಿ ಸಲಿಸಿದರು.

ಅವರು ನಾಗಮಂಗಲದಲ್ಲಿ ಜನುವಾದಿ ಮಹಿಳಾ ಸಂಘಟನೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಮಿನಿ ವಿಧಾನಸೌಧ ಆಗಮಿಸಿ ಆಗಮಿಸಿದಪ್ರತಿಭಟನಾಕಾರರು ಸರಕಾರ ಬರ ಪರಿಹಾರ ಕಾಮಗಾರಿಗೆ ಹಾಗೂ ರೈತರ ಬೆಳೆಗೆ ಪರಿಹಾರವಾಗಿ ಮಂಡ್ಯ ಜಿಲ್ಲೆಗೆ 2,000 ಕೋಟಿ ಅನುದಾನ ನೀಡಬೇಕೆಂದು ರೈತರು ಪ್ರತಿ ಎಕರೆಗೆ 50,000 ಪರಿಹಾರ ನೀಡಬೇಕು.

ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಸಾಲ ಮನ್ನ ಮಾಡಬೇಕು.

 ದಿನಗೂಲಿ ಹೆಚ್ಚಳ ಮಾಡಿ ವಾರ್ಷಿಕ 200ದಿನ ಕೆಲಸ ನೀಡಬೇಕು. ಕೂಲಿ 700ರೂ ಹೆಚ್ಚಳ ಮಾಡುವಂತೆ ತಿಳಿಸಿದರು.

 ಸಂಕಷ್ಟದಲ್ಲಿರುವ ರೈತರ ಜಮೀನುಗಳ ಕಂದಾಯವನ್ನು ವಜಾ  ಗೊಳಿಸುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಆಗಮಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು  ದಂಡಾಧಿಕಾರಿಗಳಾದ ಅಶೋಕ್ ರವರಿಗೆ ಮನವಿ ಪತ್ರ ನೀಡಿದರು.

 ಇದೇ ಸಂದರ್ಭದಲ್ಲಿ ಜನ ವಾದಿ ಮಹಿಳಾ ಸಂಘಟನಾ ಕಾರ್ಯಕರ್ತರು ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಜಿಲ್ಲಾ ಕಾರ್ಯದರ್ಶಿ  ಸುಶೀಲ ತಾಲೂಕು ಅಧ್ಯಕ್ಷ ಪ್ರೇಮಮ್ಮ.ಮಹಿಳಾ ಮುಖಂಡರಾದ ವರಲಕ್ಷ್ಮಿ ಮಂಜುಳಾ ಲಕ್ಷ್ಮಮ್ಮ ಹಾಗೂ ಅನೇಕ ಮಹಿಳಾ ಮುಖಂಡರು ಹಾಜರಿದ್ದರು