Ticker

6/recent/ticker-posts

ಅಕ್ರಮ ಗಾಂಜಾ ಮಾರಾಟಗಾರನ ಬಂದನ


 ಚಾಮರಾಜನಗರ ಜಿಲ್ಲೆ , ಚಾಮರಾಜನಗರ ಹಾಗೂ ಅಧೀಕ್ಷಕರು , ಚಾಮರಾಜನಗರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರಾದ ಮೀನಾ ಇವರು ಹನೂರು ತಾಲ್ಲೂಕು , ಮೀಣ್ಯಂ ಗ್ರಾಮ ಪಂಚಾಯಿತಿ , ಗಾಜನೂರು ಗ್ರಾಮದಲ್ಲಿರುವ ದೊಡ್ಡಸಿದ್ದೇಗೌಡ ಬಿನ್ ಲೇಟ್ ಕುಳ್ಳೇಗೌಡ ಎಂಬುವವರು ತನ್ನ ತೋಟದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುತ್ತಾರೆ . ಎಂದು ಬಂದ ಮಾಹಿತಿ ಮೇರೆಗೆ ನಡೆಸಿ 1 ಕೆಜಿ 370 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು ಮೊಕದ್ದಮೆಗಳನ್ನು ದಾಖಲಿಸಿ , ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು . ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷರಾದ ಕೆ.ತನ್ವಿರ್ , ಅಬಕಾರಿ ರಕ್ಷಕರಾದ ಕೆ.ಪ್ರದೀಪ್ ಕುಮಾರ್ , ರಮೇಶ.ಎಂ , ಎಂ.ಎನ್ ಸುಂದ್ರಪ್ಪ , ಎನ್.ಸುಜನ್‌ರಾಜ್ , ಸಿದ್ದಯ್ಯ , ಮಂಜುಪ್ರಸಾದ್.ಸಿ ಭಾಗವಹಿಸಿದ್ದರು .