ನಾಗಲಾಪೂರು ಗ್ರಾ. ಪಂ. ಅಧ್ಯಕ್ಷರಾಗಿ ರಿಂದಾಬಾಯಿ ರಾಠೋಡ ಆಯ್ಕೆ..
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ನಾಗಲಾಪೂರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ರಿಂದಾಬಾಯಿ ಕೃಷ್ಣ ರಾಠೋಡ ಉಪಾಧ್ಯಕ್ಷರಾಗಿ ಚಂದ್ರಶೇಖರ ನಾಯ್ಕ್ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಮಾಹಿತಿ ನೀಡಿದರು...ನಾಗಲಾಪೂರು ಗ್ರಾಮ ಪಂಚಾಯತ ಸಾಮಾನ್ಯ ಮಹಿಳೆ ಅಧ್ಯಕ್ಷೆ ಸ್ಥಾನಕ್ಕೆ ರಿಂದಾಬಾಯಿ ಕೃಷ್ಣ ರಾಠೋಡ 13ಮತಗಳು ಮತ್ತು ಲಕ್ಷ್ಮವ್ವ ಮಹಾದೇವಪ್ಪ 12ಮತಗಳು ಪಡೆದರು 1 ಮತಗಳಿಂದ ರಿಂದಾಬಾಯಿ ರಾಠೋಡ ಅಧ್ಯಕ್ಷರಾಗಿ ಆಯ್ಕೆಯಾದರು. ಎಸ್ ಸಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ನಾಯ್ಕ್ 13 ಮತಗಳು ಮತ್ತು ಲಕ್ಷ್ಮಣ್ಣ 12 ಮತಗಳು ಪಡೆದರು 1 ಮತಗಳಿಂದ ಚಂದ್ರಶೇಖರ ನಾಯ್ಕ್ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಚಂದ್ರಶೇಖರ ಕುಂಬಾರ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ವೀರನಗೌಡ ಲೆಕ್ಕಿಹಾಳ. ಯುವ ಮುಖಂಡರಾದ ಕೃಷ್ಣ ರಾಠೋಡ ವಿಜಯ ರಾಠೋಡ. ಮಹಾಂತೇಶ ಗುಡಿಹಾಳ ಸೇರಿದಂತೆ ಪಿಡಿಒ ಬಸವರಾಜ ಹಾಗೂ ಗ್ರಾ. ಪಂ ಸಿಬ್ಬಂದಿ ಕೂಡ ಹಾಜರಿದ್ದರು..
ಬಸವರಾಜ ಹೂನೂರು