Ticker

6/recent/ticker-posts

ನಾಗಮಂಗಲದಲ್ಲಿ ಸಾಮೂಹಿಕ ಗಣಪತಿ ವಿಸರ್ಜನ ಮಹೋತ್ಸವ ಶಾಂತಿ ಸುವ್ಯವಸ್ಥೆ ಕಾನೂನು ಕಾಪಾಡಲು ಡಿವೈಎಸ್ಪಿಚೆಲುವರಾಜ್

ನಾಗಮಂಗಲ : ಪುರಸಭೆಯ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಗಣಪತಿ ಸಂಘಗಳು  ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯೊಂದಿಗೆ ವಿಸರ್ಜಿಸುವ ಮೂಲಕ ಶಾಂತಿ ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕೆಂದು ಡಿವೈಎಸ್ಪಿ ಚೆಲುವರಾಜು ತಿಳಿಸಿದರು.

 ಪಟ್ಟಣದ ಡಿವೈಎಸ್ಪಿ ಕಛೇರಿಯಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯ ಪದಾಧಿಕಾರಿ ಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವ ತಾಲ್ಲೂಕಿನಲ್ಲೂ ಸಾಮೂಹಿಕವಾಗಿ ಗಣಪತಿ ವಿಸರ್ಜಿಸುವುದಿಲ್ಲ ನಾಗಮಂಗಲ ತಾಲ್ಲೂಕಿನಲ್ಲಿ ಕಳೆದ ಬಾರಿಯಿಂದ ವಿಸರ್ಜಿಸಲಾಗುತ್ತಿದೆ ಎಲ್ಲಾ ಗಣಪತಿ ಸಂಘಗಳು ಒಟ್ಟಾಗಿ ಒಂದೇ ದಿನ ವಿಸರ್ಜನೆ ಮಾಡುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅನುಕೂಲವಾಗುತ್ತದೆ.

21ನೇ ಸೋಮವಾರ ಸಾಮೂಹಿಕ ಗಣೇಶೋತ್ಸವ ಜರುಗಲಿದ್ದು ಗಣಪತಿ ಸಂಘಗಳ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳ ಯುವಜನತೆ ಸೇರಿದಂತೆ ಸಾವಿರಾರು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು 
ಯಾವುದೇ ಅಹಿತಕರ ಘಟನೆ ನಡೆಯದಂತೆ ಕಿಡಿಗೇಡಿಗಳ ಬಗ್ಗೆ ಗಣಪತಿ ಸಂಘಗಳು ಹಾಗೂ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯವರು 
ಎಚ್ಚರವಹಿಸಿ ಗಮನಿಸಬೇಕು ಎಂದು ತಿಳಿಸಿದರು.
ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ ಸಾಮೂಹಿಕವಾಗಿ ವಿಸರ್ಜನೆ ಮಾಡಲು ನಗರದ 23 ವಾರ್ಡ್ ಗಳಿಂದ 15 ಕ್ಕೂ ಹೆಚ್ಚು ಗಣಪತಿ ಸಂಘಗಳು ಒಪ್ಪಿರುವ ಜೊತೆಯಲ್ಲಿ ಬಾಕಿ ಉಳಿದಿರುವ ಗಣಪತಿಗಳು ಸಹ ಸಾಮೂಹಿಕವಾಗಿ ಬಿಡಲು ಮನಸು ಮಾಡಬೇಕಿದೆ.

ಈ ಬೃಹತ್ ವಿಸರ್ಜನಾ ಗಣೇಶೋತ್ಸವಕ್ಕೆ ಪೂರ್ಣ ರೀತಿಯಲ್ಲಿ ರಕ್ಷಣೆ, ಸಹಕಾರ ನೀಡಲಾಗುವುದು ಆದರೆ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಎಷ್ಟೇ ಪ್ರಭಾವಿಯಾಗಿದ್ದರೂ ಸಹ ಬಿಡುವುದಿಲ್ಲ ಎಡೆಮುರಿ ಕಟ್ಟುತ್ತೇವೆ ಎಂದು ಎಚ್ಚರಿಸಿದರು. 

ಎಲ್ಲಾ ಗಣಪತಿ ಸಂಘಗಳು ಪೋಲಿಸ್ ಠಾಣೆಯಲ್ಲಿ ಕಾನೂನಾತ್ಮಕವಾಗಿ ದಾಖಲೆಗಳನ್ನು ನೀಡುವ ಮೂಲಕ ನೊಂದಾಯಿಸಿ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ರೂರಲ್ ಕ್ರೈಂ ಸಬ್ ಇನ್ಸ್ಪೆಕ್ಟರ್ ಲಕ್ಷ್ಮಣ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.