ನಾಗಮಂಗಲ. ಸೆ:- 8 ದೇವಲಾಪುರ ಬಸ್ ನಿಲ್ದಾಣದಲ್ಲಿ 3-20ರ ಸಮಯದಲ್ಲಿ ಕೆಟಿಎಂ ಬೈಕ್ ಸಂಖ್ಯೆ KA-02 LP-0612 ಬೈಕ್ ಅಪಘಾತದಿಂದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದ ಮೃತಪಟ್ಟಿದ್ದಾರೆ.
ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ಬೈಕ್ ಸವಾರರು ನಾಗಮಂಗಲ ಮಾರ್ಗದಿಂದ ಕೇಲೆನಹಳ್ಳಿ ಗ್ರಾಮಕ್ಕೆ ಹೋಗಬೇಕಾಗಿದ್ದು ಅವರು ಬರುವ ರಭಸದಿಂದ ಡಿಯೋ ಗಾಡಿ ಹಾಗೂ ರಸ್ತೆಯ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಹಂದರಹಳ್ಳಿ ಅಭಿಷೇಕ್ ಹಾಗೂ ಪ್ರೇಮ್ ಕುಮಾರ್ ಎಂಬುವರು ಎಂದು ತಿಳಿದು ಬಂದಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಥಳ ಮಾಜರುಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕೆಶಿಪ್ ರಸ್ತೆ ಕಾಮಗಾರಿಗಳು ದೇವಲಾಪುರ ಪಟ್ಟಣದಲ್ಲಿ ರಸ್ತೆ ಕೆಲಸ ಅಪೂರ್ಣಗೊಂಡಿದ್ದು ಏಕಮುಖವಾಗಿ ಸಂಚರಿಸುತ್ತಿದ್ದು ವಾಹನ ಬಸ್ಸು ಕಾರು ಓಡಾಡಲು ಹಸ್ತವ್ಯಸ್ತವಾಗಿದೆ ಸಂಬಂಧಪಟ್ಟವರು ಮುಂಜಾಗ್ರತ ಕ್ರಮ ವಹಿಸಿದ್ದಾರೆ ಮುಂದಿನ ದಿನಗಳಲ್ಲಿ ಅವಘಡಗಳನ್ನ ನಿಲ್ಲಿಸಲು ಶೀಘ್ರವಾಗಿ ಕಾಮಗಾರಿಯನ್ನು ಮಾಡುವುದು ಉತ್ತಮವೆಂದ ಸಾರ್ವಜನಿಕರ ಅಭಿಪ್ರಾಯ ವಾಗಿದೆ.
