ನಾಗಮಂಗಲ: ಸೆ :-1ಭಕ್ತಿ, ಆಧ್ಯಾತ್ಮ ಹಾಗೂ ಸಂಸ್ಕೃತಿಯ ಸಂದೇಶವನ್ನು ಸಾರುವ ಭಕ್ತಿ ಗೀತೆಯ ನಮ್ಮ ಕರ್ನಾಟಕ ಸೇನೆ ಬಸವರಾಜ್ ಪಡುಕೋಟೆ ರವರು ತಿಳಿಸಿದರು
ಅವರು ನಾಗಮಂಗಲ ಪಟ್ಟಣ ಸಮೀಪದ ಬದ್ರಿಕೊಪ್ಪಲು ಗ್ರಾಮದಲ್ಲಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದರು.
ಸಂಗೀತದ ಮೂಲಕ ಭಕ್ತಿ ಮತ್ತು ಉತ್ತಮ ಮೌಲ್ಯಗಳನ್ನು ಜನರಲ್ಲಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಭಕ್ತಿ ಗೀತೆಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ನಮ್ಮ ನಾಡಿನ ಧಾರ್ಮಿಕಮತ್ತುಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗಣ್ಯರು ತಿಳಿಸಿದರು.
ಸಮಾಜದಲ್ಲಿಸಂಘಟನೆಗಳು ಅವುಗಳದೇ ಆದ ಉದ್ದೇಶಗಳನ್ನ ಹೊಂದಿದ್ದು ಅದೇ ರೀತಿ ನಮ್ಮ ಸಂಘಟನೆಯು ಬದುಕನ್ನು ಕಟ್ಟಿಕೊಡುವ ಉದ್ದೇಶ ಹಾಗೂ ಶೋಷಣೆಯ ವಿರುದ್ಧ ಹೋರಾಡುವ ನಮ್ಮ ಉದ್ದೇಶದಿಂದ ತಾವುಗಳು ನಮ್ಮ ಸಂಘಟನೆಗೆ ಕೈಜೋಡಿಸಬೇಕೆಂದು ರಾಜ್ಯ ಮಹಿಳಾ ಅಧ್ಯಕ್ಷರಾದ ಲಕ್ಷ್ಮಿ ರವರು ಮಾತನಾಡಿದರು.
ಸಮಾರಂಭದಲ್ಲಿ ಬೆಂಗಳೂರು ನಗರ ಉದ್ದಿಮೆದಾರರ ಘಟಕದ ಅಧ್ಯಕ್ಷರಾದ ಸತೀಶ್ ಗೌಡ ರಾಜ್ಯ ಕಾರ್ಯದರ್ಶಿ ದೇಸಾಯಿ ಗೌಡ ಚಲನಚಿತ್ರ ನಟಿ ನಿರ್ಮಲ ನಾಧನ್ ಹಾಜರಿದ್ದರು.
ಸಭೆಯಲ್ಲಿ ಗ್ರಾಮದ ಮುಖಂಡರುಗಳಾದ ಗುಡ್ಡಪ್ಪ ಸತೀಶ್ ಶ್ರೀನಿವಾಸ್.ಮಂಜುನಾಥ್ ಬಿ ಆರ್ ಕುಮಾರ್. ಈರೇಗೌಡ ಅನೇಕ ಮುಖಂಡರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಗೀತೆಯ ರಚನೆಕಾರರು, ಸಂಗೀತ ನಿರ್ದೇಶಕರು, ಗಾಯಕರು ಹಾಗೂ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಲಾಯಿತು.
ಭಕ್ತರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
