Ticker

6/recent/ticker-posts

ಬಹುಜನ ಸಮಾಜ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಭೆ


ಕೊಳ್ಳೇಗಾಲ :-ಬಹುಜನ ಸಮಾಜ ಪಕ್ಷದ   ವತಿಯಿಂದ  ಕೊಳ್ಳೇಗಾಲದ  ಶಿಕ್ಷಕರ ನೌಕರರ ಸಂಘದ ಭವನ ಕೊಳ್ಳೇಗಾಲದಲ್ಲಿ  ತಾಲೂಕು ಅಧ್ಯಕ್ಷರಾದ ಶಂಕರ್ ಚೇತನ್ ರವರು  ಕಳೆದ ತಿಂಗಳಿಂದೆ  ಅವರ ವೈಯಕ್ತಿಕ ಕಾರಣಗಳಿಂದ ಮೃತಪಟ್ಟಿದ್ದರು ಮೃತಪಟ್ಟ ಶಂಕರ್ ಚೇತನ್ ರವರಿಗೆ ಬಹುಜನ  ಸಮಾಜ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರು ಕೃಷ್ಣಮೂರ್ತಿ ರವರು ಮತ್ತು ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ರವರು ಮಾತನಾಡಿ ಶಂಕರ್ ಚೇತನ್ ರವರು ಸಮಾಜದ ಜೊತೆಗೆ ಸಮಾಜದ ಮುಖಂಡರ ಜೊತೆಗೆ ಬಹಳ ಒಡನಾಟ ಇದ್ದವರು ಮತ್ತು ಸಮಾಜ ಚಿಂತಕರು ಮತ್ತು ಬಿಎಸ್ಪಿ ತಾಲೂಕು ಅಧ್ಯಕ್ಷರು ಅವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಸಾವು ನನಗೆ ಮತ್ತು ಪಕ್ಷಕ್ಕೆ ಅಘಾತವಾಗಿದೆ. 

ಅವರು ಒಬ್ಬ ಆಕ್ಟಿವ್ ವ್ಯಕ್ತಿ ಮತ್ತು ಕ್ರಿಯಾಶೀಲ ವ್ಯಕ್ತಿ ಬುದ್ದ  ಬಸವ ಅಂಬೇಡ್ಕರ್ ರವರ ಅವರು ವಿಚಾರವಾದಿಗಳಾಗಿದ್ದರು ಆದರೂ ಇಷ್ಟು ಬೇಗ ತಮ್ಮ ಕುಟುಂಬ ಮತ್ತು ಮಕ್ಕಳು ಮತ್ತು ಪಕ್ಷ ಮತ್ತು ತಮ್ಮ ಒಡನಾಡಿಗಳು ಎಲ್ಲವನ್ನು ಮರೆತು ಹೇಗೆ ಪ್ರಾಣ ಕಳೆದುಕೊಳಲು ಅವರ ಮನಸ್ಸು ಒಪ್ಪಿತು ಎಂಬುದು  ನಮಗಿನ್ನೂ ಕಾಡುತ್ತಿದೆ.

 ಸಮಾಜದಲ್ಲಿ ಯಾರೇ ಆಗಿರಲಿ ಯಾವುದೇ ಸಮಸ್ಯೆ ಆಗಿರಲಿ ವೈಯಕ್ತಿಕವಾಗಿರಲಿ ಅಥವಾ ಸಾಮಾಜಿಕವಾಗಿರಲಿ ಎಲ್ಲದಕ್ಕೂ ಪರಿಹಾರವಿದೆ ಆದ್ದರಿಂದ ಬೇಗ ಇಂತಹ ತೀರ್ಮಾನಗಳನ್ನ ಯಾರು ತೆಗೆದುಕೊಳ್ಳಬಾರದು ಸಮಯ ಎಲ್ಲದಕ್ಕೂ ಪರಿಹಾರ ಕೊಡುತ್ತದೆ ಕಾಯಬೇಕು  ಅಥವಾ ಸಮಸ್ಯೆಗಳು ಇದ್ದರೆ ತಮ್ಮ ಒಡನಾಡಡಿಗಳ  ಜೊತೆ ಅಥವಾ ಹೇಳಿಕೊಳ್ಳಬೇಕು ಮಾನಸಿಕವಾಗಿ ಕುಗ್ಗಿದರೆ ಮಾನಸಿಕ ವೈದ್ಯರ ಸಲಹೆ ಪಡೆಯಬೇಕು ಇಲ್ಲವಾದರೆ ಇಂತಹ ಮನಸ್ಥಿತಿಗೆ ತಲುಪುತ್ತಾರೆ. 

 ಮೃತ ಶಂಕರ್ ಚೇತನ್  ಕುಟುಂಬಕ್ಕೆ ಮತ್ತು ಅವರ ಸ್ನೇಹಿತರಿಗೆ ಮತ್ತು ಅವರ ಒಡನಾಡಿಗಳಿಗೆ ದುಃಖ ಮರೆಸುವ ಶಕ್ತಿ ಆ ದೇವರು ನೀಡಲಿ  ಎಂದು ಹೇಳಿದರು ಸಂದರ್ಭದಲ್ಲಿ ಪಕ್ಷದ ಹಲವಾರು ಮುಖಂಡರು ಭಾಗವಹಿಸಿದ್ದರು  ರವರು  ಮತ್ತು ಜಿಲ್ಲಾಧ್ಯಕ್ಷರು ಮತ್ತು ಕೊಳ್ಳೇಗಾಲ ಮುಖಂಡರಾದ ಮಣಿ ರವರು .ಚಾಮರಾಜನಗರ ವಕೀಲರ ಸಂಘದ ಅಧ್ಯಕ್ಷರು,ಮುಖಂಡರಾದ ಬ್ಯಾಡ್ಮೂರು ಬಸವಣ್ಣ ಮತ್ತು ಹನೂರು ತಾಲೂಕು ಅಧ್ಯಕ್ಷರು ಮತ್ತೊಬ್ಬ ಮುಖಂಡರಾದ ಶಿವು ಉತ್ತಂಬಳಿ ರವರು ಮತ್ತು ಕಾರ್ಯಕರ್ತರು ಹಾಜರಿದ್ದರು