ಪಾಂಚೆ ಅಂದರೇ ಕೇವಲ ಒಂದು ಹೆಸರು ಮಾತ್ರ ಅಲ್ಲ ತುಳುನಾಡಿನ ಕಂಬಳ ಕ್ಷೇತ್ರದಲ್ಲಿ ಸಾಧನೆಯ ಪ್ರಶಸ್ತಿ ಯನ್ನು ಪಡೆದ ಮಂಗಳೂರು ಸುರತ್ಕಲ್ ಸಮೀಪದ ಖಂಡಿಗೆಯ ಹೆಸರುವಾಶಿಯಾದ ಕಂಬಳದ ಕೋಣದ ಹೆಸರು ಪಾಂಚೆ.
ಮಂಗಳೂರು ನಮ್ಮ ಕುಡ್ಲ ಚಾನೆಲ್ ವತಿಯಿಂದ ಪಾಲೆಮಾರ್ ಸೆಂಟರ್ ಮೇರೀಹಿಲ್ ಮಂಗಳೂರು ಇಲ್ಲಿ ಜರಗಿದ ಸಮಾರಂಭದಲ್ಲಿ 2026 ರ ನೇಗಿಲು ಹಿರಿಯ ವಿಭಾಗದಲ್ಲಿ ಸರಣಿ ಶ್ರೇಷ್ಠ ದ್ವಿತೀಯ ಪ್ರಶಸ್ತಿ ಯನ್ನು ಗೆದ್ದುಕೊಂಡಿದೆ ಪಾಂಚೆ ಎಂದರೆ ಒಂದು ಕೋಣದ ಹೆಸರು ಈ ಕೋಣವನ್ನು ಕಂಬಳ ಕ್ಷೇತ್ರಕ್ಕೆ ಪರಿಚಯಿಸಿದರು ಕುಸುಮಾಕರ ಪೂಜಾರಿ ಇವರಿಗೆ ಕಂಬಳ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಕಂಬಳ ಕ್ಷೇತ್ರದಲ್ಲಿ ಪ್ರಶಸ್ತಿ,,2017-2018ರಲ್ಲಿ ಎರಡು ಜೂನಿಯರ್ ಕೋಣಗಳ ಜೊತೆ ನೇಗಿಲು ಕಿರಿಯ ವಿಭಾಗದಲ್ಲಿ ಪಾದಾರ್ಪಣೆ ಮಾಡಲಾಯಿತು.
ತದನಂತರ ಜಿಲ್ಲೆಯ ಎಲ್ಲಾ ಕಂಬಳದಲ್ಲಿ ಬಾಗ ವಹಿಸಲಾಯಿತು
2021-2022ರಲ್ಲಿ ಈಗಿನ ಚಾಂಪಿಯನ್ ಕೋಣ ಚಾಂಪಿಯನ್ ಆಗಿ ಮರಿ ಕೋಣವಾಗಿ ಆಗಮನ ವಾಯಿತು.
2022-2023ರಲ್ಲಿ ಋತುವಿನ ಭಾಗವಹಿಸಿದ ಎಲ್ಲಾ ಕಂಬಳಗಳಲ್ಲಿ, ನೇಗಿಲು, ಕಿರಿಯ ವಿಭಾಗದಲ್ಲಿ ಸೆಮಿಫೈನಲ್ ಪ್ರೇವೇಶಿಸಿತು.
2024ರಲ್ಲಿ ನಡೆದ ಜಿಲ್ಲಾ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ ಮತ್ತು ಜಿಲ್ಲೆಯ ಎಲ್ಲಾ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ,2024,-2025ರಲ್ಲಿ ಕಿರಿಯ ವಿಭಾಗದಲ್ಲಿ ಮಂಗಳೂರು ಹಾಗೂ ಇತರ ಬಂಟರ ಕಂಬಳಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
2025-2026ರ ,ನೇಗಿಲು ಹಿರಿಯ ವಿಭಾಗದಲ್ಲಿ ಭಾಗವಹಿಸಿದ ಇಪ್ಪತ್ತೊಂದು ಕಂಬಳದಲ್ಲಿ, ಎಂಟು ಪ್ರಥಮ, ಹಾಗೂ ಎರಡು, ದ್ವಿತೀಯ ಸ್ಥಾನ ಪಡೆದು ಈ ವರ್ಷದ ಸರಣಿ ಶ್ರೇಷ್ಠ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡಿದೆ ಮಂಗಳೂರು ಕಂಬಳದಲ್ಲಿ ಅತೀ ವೇಗದ ಓಟದೊಂದಿಗೆ ನೂತನ ದಾಖಲೆ ಬರೆದಿದೆ ಇವರ ಈ ಸಾಧನೆಯ ಹಲವಾರು ಸ್ನೇಹ ಕೂಟಗಳಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ ಅದು ಅಲ್ಲದೆ,2026ರ ಕಂಬಳ ಪ್ರಶಸ್ತಿ ಲಭಿಸಿದೆ.
ತುಳುನಾಡಿನಲ್ಲಿ ಕಂಬಳ ಬಹಳ ಹೆಸರುವಾಸಿ ಹಲವು ವರುಷಗಳ ಪಾರಂಪರೆ ಇದೆ ಕಂಬಳ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಪಾಂಚೆ ಇನ್ನಷ್ಟು ಹೆಸರುವಾಸಿ ಆಗಲಿ ಇನ್ನಷ್ಟು ಪ್ರಶಸ್ತಿ ಲಭಿಸಲಿ ಕುಸುಮಾಕರ ಪೂಜಾರಿಯವರ ಈ ಸಾಧನೆ ಮೆಚ್ಚುವಂತದ್ದು.
,✍️ಲೇಖನ, ರಾಮಚಂದ್ರ ಕೀಳೆಂಜೂರು
