Ticker

6/recent/ticker-posts

ಕೊಳ್ಳೇಗಾಲ.ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26 ನೇ ಸಾಲಿನ ಆಡಳಿತ ಮಂಡಳಿ ಸದಸ್ಯರ ವಾರ್ಷಿಕ ಮಹಾಸಭೆ

ಕೊಳ್ಳೇಗಾಲ. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2025-26 ನೇ ಸಾಲಿನ ಆಡಳಿತ ಮಂಡಳಿ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಿದ್ದರು.

ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷರು ಎಂ.ಗೋವಿಂದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದಿರುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸಲು ಹಾಗೂ ಸಂಘದ ಅಭಿವೃದ್ಧಿಗೆ ಸರ್ವತೋಮುಖವಾಗಿ ಶ್ರಮವಹಿಸಿ ಮುಂದೆ ಸಂಘವನ್ನು ಉತ್ತಮ ಸ್ಥಿತಿಗೆ ತರಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನದಲ್ಲಿ ರೂ.1,84,76,882.00 ಗಳು ಬಂದಿದ್ದು, ಸದರಿ ಹಣವನ್ನು ನಾಫೇಡ್ ಸಂಸ್ಥೆಯವರಿಗೆ ಪಾವತಿಸಿದ್ದು ಇನ್ನೂ ಬಾಕಿಯಿರುವ ಸಹಾಯಧನದ ಬಿಲ್ಲಿನ ಮೊಬಲಗನ್ನು ಸಂಘಕ್ಕೆ ಜಮಾ ಆಗಲು ಈಗಾಗಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿದ್ದು ಸಹಾಯಧನದ ಬಿಲ್ಲು ಸಂಘಕ್ಕೆ ಜಮಾ ಆದ ತಕ್ಷಣ ನಾಫೇಡ್ ಸಂಸ್ಥೆಗೆ ನೀಡಲು ಬಾಕಿಯಿರುವ ಹಣವನ್ನು ಪಾವತಿಸಿ ಪುನ: ಪಡಿತರ ಆಹಾರಧಾನ್ಯ ವಿತರಣೆಗೆ ಕ್ರಮವಹಿಸುತ್ತೇವೆ. 

ನಿಮ್ಮಲ್ಲರಿಗೂ ತಿಳಿದಿರುವಾಗೇ ಸಂಘದಿಂದ ಈಗಾಗಲೇ ಹನೂರು ಭಾಗದಲ್ಲಿ 0.70 ಸೆಂಟ್ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದು ಸಂಘದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಹೊತ್ತು ನೀಡಲಾಗುವುದು. ನಿಮ್ಮಲ್ಲರ ಸಹಕಾರದಿಂದ 2025-26ನೇ ಸಾಲಿನಲ್ಲಿ ರೂ.4,03,556.08 ಗಳ ನಿವ್ವಳ ಲಾಭ ಬಂದಿದ್ದೂ ಇನ್ನೂ ಹೆಚ್ಚಿನ ಲಾಭಗಳಿಸಲು ನಿಮ್ಮಲ್ಲರ ಸಹಕಾರ ಅತ್ಯಮೂಲ್ಯವಾಗಿದ್ದು ಸಂಘವನ್ನು ಮತ್ತಷ್ಟು ಒಳ್ಳೆಯ ರೀತಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ತಾವೆಲ್ಲರೂ ಸಹಕಾರ ನೀಡುತ್ತೀರಿ ಎಂದು ಅಪೇಕ್ಷಿಸುತ್ತೇನೆ.

 ಸಂಘದ ಅಭಿವೃದ್ಧಿ ಇನ್ನುಳಿದಿರುವ ದಿನಗಳಲ್ಲಿ ಸರ್ವಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರು ಕೆ.ರಾಜುಗೋಪಾಲ, ನಿರ್ದೇಶಕರು ಎನ್.ಚಾಮರಾಜು, ಎಸ್.ಮುರುಡೇಶ್ವರ ಸ್ವಾಮಿ, ಎಸ್.ಎಂ.ಜಗದೀಶ್ ನಾಯ್ಕ, ಎಂ.ಜಗದೀಶ್, ರೇಚಪ್ಪ, ಎಂ.ಮುತ್ತುರಾಮ, ಸಿ.ಎಲ್ಲಪ್ಪನ್, ವಿ.ಉತ್ತಮ್ಮ, ವತ್ಸಲ ಸಿದ್ದರಾಜು, ಪ್ರಭಾರ ಕಾರ್ಯದರ್ಶಿ ಟಿ.ಲಿಂಗರಾಜು ಹಾಗೂ ಸದಸ್ಯರು ಇದ್ದರು.