Ticker

6/recent/ticker-posts

ತುಮರಿಕೊಪ್ಪ–ರಂಗಾಪುರ ಗ್ರಾಮಗಳಲ್ಲಿ ₹90 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ


ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತುಮರಿಕೊಪ್ಪ ಹಾಗೂ ರಂಗಾಪುರ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ₹90 ಲಕ್ಷ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು,

 ಮೂಲಸೌಕರ್ಯಗಳ ಅಭಿವೃದ್ಧಿ, ಶಿಕ್ಷಣ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿಸ್ತರಣೆ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಹಗಲಿರುಳು
 ಶ್ರಮಿಸುತ್ತಿರುವುದಾಗಿ ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.

ಈ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಅನುಷ್ಠಾನಗೊಳಿಸಲಿದೆ.
ಕಾರ್ಯಕ್ರಮದಲ್ಲಿ ಫಾದರ್ ಮೇಲ್ವಿನ್ ಡಿಸೋಜಾ, ಬಸವರಾಜ ದಾಸನಕೊಪ್ಪ, ರುದ್ರಯ್ಯ ಹಿರೇಮಠ, ಮಂಜುನಾಥ ದನಿಗೊಂಡ, ಚಾರ್ಲ್ಸ್ ಕಲಘಟಗಿ, ಎಸ್.ವಿ. ಪಾಟೀಲ, ಗುರು ಹರಿಜನ, ರುದ್ರಗೌಡ ಪಾಟೀಲ, ಮಂಜುನಾಥ ಹೂಗಾಡಿ, ಜಂಬುಲಿಂಗ ಅಂಗಡಿ, ಅಂತೋನಿ ಕರ್ನೂಲ್, ಈರಯ್ಯ ಕೊಠಬಾಗಿ, ಎಸ್.ವಿ. ತಡಸಮಠ, ಬಿ.ವೈ. ಪಾಟೀಲ, ಶ್ರೀಶೈಲ ಕೌಜಲಗಿ, ಅರುಣಕುಮಾರ ಅಷ್ಟಗಿ, ಪರಶುರಾಮ ಸಾವಂತ, ಚಂದ್ರಶೇಖರ ಬಿ., ಸೋಮಶೇಖರ ಬೆನ್ನೂರ, ಶಿವಲಿಂಗ ಮೂಗಣ್ಣವರ, ಮಂಜುನಾಥ ಚಿಕ್ಕಮಠ, ಗಿರೀಶ ಸೂರ್ಯವಂಶಿ, ನಿಂಗಪ್ಪ ಬೆಳ್ಳಿವಾಲಿ, ಹನುಮಂತ ಕಾಳಿ, ಮಂಜುನಾಥ ವಾಲಿಕಾರ, ದ್ಯಾಮಣ್ಣ ಹುಲಕೊಪ್ಪ ಸೇರಿದಂತೆ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಗ್ರಾಮದ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವರದಿ : ಮಾರುತಿ ಲಮಾಣಿ