ನಾಗಮಂಗಲ. ಆ:- 27 ಸರ್ಕಾರಿ ಶಾಲೆಯ ಉತ್ತೇಜಿಸುವ ಸಲುವಾಗಿ ಗ್ರಾಮೀಣ ಮಕ್ಕಳ ವ್ಯಾಸಂಗದ ಉತ್ಸಾಹಕ್ಕೆ ನಾಗಮಂಗಲದ ಬೆಳಕು ಮೊಬೈಲ್ ತಂಡ ಸಹಾಯ ಮಾಡುತ್ತಿರುವುದು ಸಾರ್ಥಕ ಎಂದು ನಿವೃತ್ತ ದೈಹಿಕ ಪರಿವೀಕ್ಷಕರಾದ ಶಿವಣ್ಣ ಗೌಡ ಅಭಿಪ್ರಾಯ ಪಟ್ಟರು.
ಅವರು ನಾಗಮಂಗಲ ತಾಲೂಕು ಚಿನ್ಯ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ನೀಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಸೇವೆಯಲ್ಲಿ ಸಂಪಾದನೆಗೆ ಪ್ರಾಮುಖ್ಯತೆ ನೀಡದೆ ಗ್ರಾಮೀಣ ಮಕ್ಕಳ ಸರ್ಕಾರಿ ಶಾಲೆಗಳ ಬೆಳವಣಿಗೆ ಮಕ್ಕಳ ಶಿಕ್ಷಣದ ಕಲಿಕೆಯ ಪೈಪೋಟಿಯ ಯುಗದಲ್ಲಿ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಶಿಕ್ಷಣದಲ್ಲಿ ಪೈಪೋಟಿಗೆ ಸಮಾನಂತರವಾಗಿ ಬೆಳೆಯಲು ನಾಗಮಂಗಲದ ಬೆಳಕು ಮೊಬೈಲ್ ತಂಡ ವ್ಯವಹಾರ ಹೆಚ್ಚಿಸುವ ದೃಷ್ಟಿಯ ನಿಟ್ಟಿನಲ್ಲಿ ಹೊರತುಪಡಿಸಿ ಸೇವಾ ಮನೋಭಾವನೆಯಲ್ಲಿ ಈ ಕೆಲಸ ಸಾರ್ಥಕವೆಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಮಕ್ಕಳ ಕಲಿಕೆಯು ಶಿಕ್ಷಣದಲ್ಲೂ ಪೈಪೋಟಿಯತ್ತ ಬೆಳೆಯಲು ಸಹಕಾರಿಯಾಗುವ ದೃಷ್ಟಿಯಿಂದ ಕ್ಲಬ್ ಸಹಾಯ ನೀಡುತ್ತಾ ಬಂದಿದೆ ಎಂದು ಶ್ರೀಕಾಂತ್ ಕಣ್ವ.ಪಿ ರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಮೈಸೂರ್ ಇವರಿಂದ ಶಾಲಾ ಮಕ್ಕಳಿಗೆ ಎಲ್ ಇ ಡಿ ಟಿವಿ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಕ್ಲಬ್ ಪದಾಧಿಕಾರಿಗಳಾದ ಎ.ಜೆ ಕೃಷ್ಣಮೂರ್ತಿ ಡಾ. ರಾಘವೇಂದ್ರ ರವಿಕಿರಣ್ ಚಂದ್ರು ರವರುಗಳು ಉಪಸಿ ತಿರಿದ್ದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕುಮಾರ್ ಆಚಾರ್ ಉಪಾಧ್ಯಕ್ಷರಾದ ರಮೇಶ್ ಹಾಗೂ ಬೆಳಕು ಮೊಬೈಲ್ ಸಂಸ್ಥಾಪಕರಾದ ಕಾರ್ತಿಕ್ ರವರು ಹಾಗೂ ಸಿಆರ್‌ಪಿ ಪಾಂಡುರಂಗ ವಿಠಲ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು ಸದಸ್ಯರು ಹಾಗೂ ಶಿಕ್ಷಕ ವರ್ಗ ಹಾಜರಿದ್ದು ಮುಖ್ಯ ಶಿಕ್ಷಕರಾದಜವರಯ್ಯನವರು ಸ್ವಾಗತಿಸಿದರು.
