ನಾಗಮಂಗಲ. ಆ:- 28 ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ಥಳೀಯವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಆಂದೋಲನ ಸಭೆಗಳನ್ನು ನಡೆಸಿ ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸುವ ಸಭೆಯ ಉದ್ದೇಶವಾಗಿದೆ ಎಲ್ಲಾ ಸಭೆಗಳ ಅಧ್ಯಕ್ಷತೆಯನ್ನು ಸಚಿವರಾದ ಚೆಲುವರಾಯಸ್ವಾಮಿ ಅವರು ಆಗಮಿಸಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೇಶ್ ತಿಳಿಸಿದ್ದಾರೆ.
ನಾಗಮಂಗಲ ತಾಲೂಕಿನಲ್ಲಿ ಸಪ್ಟೆಂಬರ್ ತಿಂಗಳ ಎಲ್ಲಾ ಶನಿವಾರ ಪ್ರಜಾ ಸೇವಾ ಆಂದೋಲನ ಸಭೆ ನಡೆಸಲು ಆದೇಶವಾಗಿದ್ದು.
ಸೆಪ್ಟಂಬರ್ ತಿಂಗಳ 5 ರಂದು ಕಸಬಾ ಹೋಬಳಿ ನಾಗಮಂಗಲ ಟೌನ್ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ 10:30 ಕ್ಕೆ ನಡೆಯುತ್ತದೆ.
ಸೆಪ್ಟಂಬರ್ 12ರಂದು ಎರಡನೇ ಶನಿವಾರ 10.30 ಕ್ಕೆ ದೇವಲಾಪುರ ಶ್ರೀ ಲಕ್ಷ್ಮಿಕಾಂತ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದೆ.
ಸೆಪ್ಟಂಬರ್ 19 ರಂದು ಮೂರನೇ ಶನಿವಾರ 10.30 ಕ್ಕೆ ಅಂಬೇಡ್ಕರ್ ಭವನ ಹೊಣೆಕೆರೆ ಗ್ರಾಮದಲ್ಲಿ ಏರ್ಪಡಿಸಲಾಗಿದೆ
ಸಪ್ಟೆಂಬರ್ 26ರಂದು ನಾಲ್ಕನೇ ಶನಿವಾರ ಪಟ್ಟಣ ಪಂಚಾಯತ್ ಆವರಣ ಬೆಳ್ಳೂರು ಹೋಬಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಈ ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿಯವರು ಭಾಗವಹಿಸಲಿದ್ದಾರೆ.
ಈ ಸಭೆಗೆ ಸಂಬಂಧಪಟ್ಟ ತಾಲೂಕಿನಎಲ್ಲಾಅಧಿಕಾರಿಗಳು ಭಾಗವಹಿಸಿದ್ದಾರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ
