ನಾಗಮಂಗಲ. ಆ:- 30 ಜೀವನ ಮೌಲ್ಯದ ಆತ್ಮಸಾಕ್ಷಿಯಂತೆನಿಜವಾದಬದುಕಿನಮಾರ್ಗರೂಪಿಸುವುದು ಗುರುಪರಂಪರೆಯ ಮೌಲ್ಯವಾಗಿದೆ ಎಂದು ನಿವೃತ್ತ ಶಿಕ್ಷಕರಾದ ಟಿ.ಪುಟ್ಟಸ್ವಾಮಿಗೌಡ ರವರು ತಿಳಿಸಿದರು.
ಅವರು ದೇವಲಾಪುರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು 1984- 85 ನೇ ಸಾಲಿನ ವಿದ್ಯಾರ್ಥಿಗಳು ಗುರು ವಂದನೆ ಹಾಗೂ ಸ್ನೇಹಸಮ್ಮಿಲನ ಸಮಾರಂಭ ಏರ್ಪಡಿಸಿದ್ದು ಈ ಕಾರ್ಯಕ್ರಮ ಉದ್ಘಾಟಿಸುತ್ತಾ ಮಾತನಾಡಿದರು.
ಬದಲಾದ ಕಾಲ ಬದಲಾದ ವೃತ್ತಿ ಜೀವನ ಬದಲಾದ ಶಿಕ್ಷಣದ ಸೇವೆಗಳ ಮೌಲ್ಯವರ್ಧನೆಯು ಇತ್ತೀಚೆಗೆ ಹಾಗೂ ಹಿಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಅನುಗುಣವಾಗಿ ಕಠಿಣ ವ್ಯವಸ್ಥೆಯ ಬೋಧನಾ ಕೌಶಲ್ಯವಿದ್ದು ವಿದ್ಯಾರ್ಥಿಗಳನ್ನು ಸಂಸ್ಕಾರ ಮೌಲ್ಯವರ್ದಿತವಾಗಿ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳೆಯುವಂತೆ ಶಿಕ್ಷಣ ನೀಡಲು ಅವಕಾಶ ವಂಚಿತರಾಗದೆ ಶಿಕ್ಷಣದ ವ್ಯವಸ್ಥೆಗೆ ಹೊಂದಿಕೊಳ್ಳುವ ದಾರಿಯಾಗಿ ಮಾಡುವುದು ನಮ್ಮಗಳ ಕರ್ತವ್ಯ ಆತ್ಮಸಾಕ್ಷಿಯ ಮಾನವಿಯ ಮೌಲ್ಯ ರೂಪಿಸುವ ವ್ಯವಸ್ಥೆ ನಮ್ಮ ಮೇಲಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಶಾಲಾ ದಿನಗಳನ್ನು ಸ್ಮರಿಸಿಕೊಂಡು, ತಮ್ಮ ಜೀವನದ ಯಶಸ್ಸಿಗೆ ಮಾರ್ಗದರ್ಶನ ನೀಡಿದ ಗುರುಗಳಿಗೆ ಗೌರವ ಸಮರ್ಪಿಸಿದರು. ಹಲವು ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಒಂದಾದ ಸ್ನೇಹಿತರು ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತಸ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗುರುಗಳನ್ನು ಸನ್ಮಾನಿಸಿ, ಅವರ ಶಿಕ್ಷಣ ಸೇವೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಕೊಂಡಾಡಲಾಯಿತು.
ಗುರುಗಳಮಾರ್ಗದರ್ಶನವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮಹತ್ವದಪಾತ್ರ ವಹಿಸುತ್ತದೆ. ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿದೆ ಎಂದು ನಿವೃತ್ತ ಶಿಕ್ಷಕರಾಗಿದ್ದ ಸಿದ್ದಲಿಂಗ ಚಾರ್ ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಹಾಲಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರುಗಳಿಗೂ ಗೌರವ ಸಮರ್ಪಣೆ ಮಾಡಿದರು
