ಗೋಳಿ ಎಂಬ ಶಬ್ದ ತುಳು ಬಾಷೆಯಲ್ಲಿ ಚಿರಪರಿಚಿತ ಗೋಳಿ ಮರ ಎಲ್ಲರಿಗೂ ತಿಳಿದಿದೆ ಇದು ದಟ್ಟವಾಗಿ ಬೆಳೆಯುತ್ತದೆ ಆದರೆ ಇದರ ಹಿಂದೆ ಒಂದು ದೊಡ್ಡ ಕಥೆ ಇದೇ.
ಅದೇ ರೀತಿ ಗೋಳಿ ಎಂಬ ಪದವು ದೈವರಾಧನೆಯ ಒಂದು ಪ್ರಮುಖ ಅಂಶ ಎಂದು ಇತಿಹಾಸ ನುಡಿಕಟ್ಟುಗಳ ಮೂಲಕ ತಿಳಿದು ಬರುತ್ತದೆ, ಪ್ರತಿ ಮಾಗಣೆಗಳಲ್ಲಿ ಗೋಳಿ ಎಂಬ ಪ್ರದೇಶದಲ್ಲಿ ದೊಂಪದ ಬಲಿ ಅಥವಾ ಐದಾರು ಕಡೆಗಳಿಂದ ಭಂಡಾರ ಬಂದು ನಡೆಯುವ ಪದ್ಧತಿ ಪುರಾತನ ಇಂದು ಮಾಯವಾಗುತ್ತಾ ಬರುತಿದ್ದರು ಹಳೆಯ ಪುರಾವೆಗಳನ್ನು ಹಿಡಿದುಕೊಂಡು ಮತ್ತೆ ಆಚರಣೆಗಳ ಆರಂಭ ಮಾಡುತ್ತಿರುದನ್ನು ಕಾಣಬಹುದು,
ಕುತ್ತೆತೂರು ಮೂರುನಾಡು ಮಾಗಣೆಯ ಹುಟ್ಟು ಮತ್ತು ದೈವರಾಧನೆಯ ಕಟ್ಟು ಗಮನಿಸಿದರೆ ಸೂರಿಂಜೆಯಲ್ಲಿರುವ ಬೊಳ್ಳಾರಗೋಳಿ ಐತಿಹಾಸಿಕವಾಗಿಯೂ ದೈವಿಕವಾಗಿಯೂ ಪ್ರಮುಖವಾಗಿದೆ, ಗೋಳಿ ಎಂಬ ರಣರಂಗ ತುಳುವಿನಲ್ಲಿ ಹೇಳುವುದಾದರೇ, ಲಡಾಯಿದ ಕಲ ಎಂದು ಅರ್ಥ ಮಾಗಣೆಯ ನಡುವೆ ನ್ಯಾಯ ತೀರ್ಮಾನ ಆಗದೇ ಇದ್ದರೆ ದಾಳಿ ಸುಲಿಗೆಯಂತಹ ಅನಾಗರಿಕ ಕ್ರಮ ಹೊರತುಪಡಿಸಿ ಯುದ್ಧದ ಮೂಲಕ ಸೋಲು ಗೆಲುವು ನಿರ್ಧಾರವಾಗುವ ಶಕ್ತಿ ಪ್ರದರ್ಶನ ಧರ್ಮ ಯುದ್ಧದ ಕಲವನ್ನು ಗೋಳಿ ಎಂದು
ಬನ್ನಿಸಬಹುದು ಮೂರುನಾಡು ಮಾಗಣೆ ನಿರ್ಮಾಣವಾದದ್ದು ಧರ್ಮ ಯುದ್ಧದ ಮೂಲಕ ಎಂಬುವುದಕ್ಕೆ ಸಾಕ್ಷಿಯಾಗುತ್ತದೆ ಇಲ್ಲಿ ವಿಶಾಲವಾದ ನೆರಳು ಹರಡುವ ಗೋಳಿ ಮರ ಇತ್ತು ಎಂದು ಹಿರಿಯರು ಹೇಳುತ್ತಾರೆ,
ಇನ್ನೊಂದು ಗೋಳಿಯ ಕುರುಹು ಇರುವುದು ಮಂಗಳ ಪೇಟೆಯಲ್ಲಿ ಈ ಗೋಳಿಗಳು ಸಾಮಾನ್ಯವಾಗಿ ಎರಡು ಮಾಗಣೆಗಳ ಗಡಿ ಭಾಗದಲ್ಲಿ ಇರುವುದನ್ನು ಕಾಣಬಹುದು ಮಂಗಳಪೇಟೆಯು ಪೇಜಾವರ ಮಾಗಣೆಮತ್ತು ಮೂರುನಾಡು ಮಾಗಣೆ ಗಡಿಪ್ರದೇಶ ಅದೇ ರೀತಿ ಬೊಳ್ಳಾರು ಕೂಡ ಗಡಿ ಪ್ರದೇಶವಾಗಿ ಕಂಡು ಬರುತ್ತದೆ ಇನ್ನೊಂದು ಮದ್ಯದ ಗಾಂದೊಟ್ಯದಲ್ಲಿದೆ ಎಂಬ ಮಾಹಿತಿ ಇದೇ
ಮುರೂನಾಡು ಮಾಗಣೆಯನ್ನು ನಿರ್ಮಿಸಿದ್ದು ಜುಮಾದಿ ಬಂಟ ದೈವ ಜುಮಾದಿ ದೈವದ ಪುರುಪು ಅಂದರೆ ಪ್ರಸರಣವನ್ನು ಗಮನಿಸಿದರೆ ಬೈಲ ಬೂಡುವಿನಿಂದ ಪಡ್ರೆಗೆ ಬಂದ ಜುಮಾದಿ ದೈವವು ಆನಂತರ ಕೋಟ್ಯಾರು ಬಾಳಿಕೆಗೆ ಬರುತ್ತದೆ ಅಲ್ಲಿಂದ ಪೊಯ್ಯೇ ಎಂಬಲ್ಲಿ ಧೂಮ ಬೈದನಿಂದ ಬೊಂಡದ ಅಸರ್ ದೈವ ಸೇವಿಸುವ ಮೊದಲು ದೂಮಬೈದ ಎಂಬ ನರಮಾನಿ ಗೆ ಕೊಡುವ ಒಂದು ಪದ್ಧತಿ ಕೂಡ ದೈವರಾಧನೆಯಪದ್ಧತಿಯಲ್ಲಿ ಬಹುಶ ಮೂರುನಾಡು ಮಾಗಣೆಯಲ್ಲಿ ಮಾತ್ರ ಇರುವಂತದ್ದು, ಏಳುನಾಡು ಮಾಗಣೆಯನ್ನು ಮುರಿದು ಮೂರುನಾಡು ಮಾಗಣೆಯನ್ನು ನಿರ್ಮಿಸಿದೆ ಎಂದು ಜುಮಾದಿ ದೈವ ನುಡಿಕಟ್ಟಿನಲ್ಲಿ ಹೇಳುತ್ತದೆ ಇದೊಂದು ರೋಚಕ ಕಥೆ ಈ ಮೂರುನಾಡು ನಿರ್ಮಾಣವಾದದ್ದು ಬೊಳ್ಳರಾ ಗೊಳಿಯಲ್ಲಿ, ಜುಮಾದಿ ದೈವ ನನಗೊಂದು ರಾಜ್ಯ ಬೇಕು ಅದರಲ್ಲಿ ಶಾಂತಿ ಸಮಾಧಾನ ನೆಮ್ಮದಿ ನೆಲೆಸಬೇಕು ಎಂದು ಬಯಸಿ ಏಳುನಾಡಿನ ಅಧಿಪತಿ ಕೊಡಮಂದಾಯನಲ್ಲಿ ಭಿನ್ನಹ ಮಾಡುತ್ತದೆ ಇದು ಸಾಧ್ಯವಾಗದೆ ಹೋದಾಗ ಯುದ್ಧಕ್ಕೆ ಅಣಿಯಾಗುತ್ತದೆ ಜುಮಾದಿ ದೈವ ಹೇಳುವ ಏಳ್ ರಾತ್ರಿ ಏಳ್ ಪಗೆಲ್ದ ಅಂಕ ನಡೆದ್ದದ್ದು ಈ ಬೊಳ್ಳರಾಗೊಳಿಯಲ್ಲಿ ಈ ಯುದ್ಧದಲ್ಲಿ ಸೋಲು ಗೆಲುವು ತೀರ್ಮಾನ ಆಗದೆ ಇದ್ದಾಗ ರಕ್ತಪಾತವನ್ನು ತಡೆಯಲು ಕಾಂತೇರಿ ಜುಮಾದಿ ಸಂಧಾನ ಪ್ರಕ್ರಿಯೆ ನಡೆಯುತ್ತದೆ ಮೂರು ಮಾಗಣೆ ಕುತ್ತೆತೂರು, ಸೂರಿಂಜೆ, ಸುರತ್ಕಲ್, ಎಕ್ಕಾರು, ಪ್ರದೇಶವು ದೈವಾರಾಧನೆಯ ಶಕ್ತಿಯಾಗಿದೆ ಈ ಜಾಗಕ್ಕೆ ಪ್ರತಿ ಒಂದು ಇತಿಹಾಸ ಇರುವುದು ವಿಶೇಷ ಇಲ್ಲಿಯ ಜುಮಾದಿ ದೈವದ ಮಾಣಿ, ದಿ, ಮಹಾಬಲ ಪೂಜಾರಿ ದೈವ ಕಟ್ಟುವವರಾದ, ದಿ, ಗೋಪಾಲ ಪಂಬದ, ದಿ ಐತಪ್ಪ ಪಂಬದ, ಬರೀಪಾಟ್ಲ ಶ್ರೀನಿವಾಸ ಮೂಡುತ್ತಾಯ, ಬಂಗಾರ್ ಭಟ್, ಮೊದಲಾದವರು, ಇವರ ನುಡಿಕಟ್ಟು ಮದಿಪುಗಳನ್ನು ಕೇಳಿದ ಜನರು ರೋಮಾಂಚನಗೊಳ್ಳುತ್ತಿದ್ದರು.
ಇಲ್ಲಿ ಇದೇ, ಏಪ್ರಿಲ್, 2ನೇ ತಾರೀಕಿನಿಂದ, 8,ತಾರೀಕಿನವರೆಗೆ ಸೂರಿಂಜೆ ಬೊಳ್ಳರುಗುತ್ತಿನ ಬಾಕಿಮಾರು ಗದ್ದೆಯಲ್ಲಿ ಪಂಚ ದೈವಗಳ ನೆಮೋತ್ಸವ ನಡೆಯಲಿದೆ ಸುಮಾರು 63ವರುಷಗಳ ನಂತರ ನಡೆಯಲಿದೆ, ಶಿಬರೂರು ಕೊಡಮಣಿತ್ತಾಯ, ಜಂತಬೆಟ್ಟು ಶ್ರೀ ಬಂಟ ಸಾರಾಳ ಧೂಮಾವತಿ, ಶ್ರೀ ಕೊಡಪದ ಪಂಜುರ್ಲಿ, ಕಲ್ಲಂಜಬಾಳಿಕೆ ಶ್ರೀ ಕಾಂತೇರಿ ಧೂಮಾವತಿ ಬಂಟ ಹಾಗೂ ಪುಂಡು ಜಾರಿಗೆ ಶ್ರೀ ಜಾರಂದಾಯ ಬಂಟ ದೈವಗಳಿಗೆ ನೆಮೋತ್ಸವ ನಡೆಯಲಿದೆ ಇಲ್ಲಿ ದಿನಪ್ರತಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕಿಲೆಂಜೂರು ಕುಡ್ತಿಮಾರು ಗುತ್ತಿನಿಂದ ಹಾಗೂ ಶಿಬರೂರಿನಿಂದ ಹೊರೆ ಕಾಣಿಕೆ ಆಗಮಿಸಲಿರುವುದು ಈ ಕಾರ್ಯಕ್ರಮದಲ್ಲಿ ಕಾಂತರಾ ಖ್ಯಾತಿಯ ನಟ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅನೇಕ ಗಣ್ಯರು ಆಗಮಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಿ
ಬೊಳ್ಳಾರಗೋಳಿ ಪಂಚ ದೈವಗಳ ನೇಮೋಸ್ಸವಕ್ಕೆ ಹಾರ್ದಿಕ ಸ್ವಾಗತ
✍️ರಾಮಚಂದ್ರ ಕಿಲೆಂಜೂರು
