Ticker

6/recent/ticker-posts

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರಿಂದ ಪ್ರತಿಭಟನೆ

ಚಾಮರಾಜನಗರ : ತಾಲ್ಲೂಕಿನ ಕುದೇರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾರ್ಯ ವೈಖರಿ ಖಂಡಿಸಿ ಅನಿರ್ದಿಷ್ಟ ಸತ್ಯಾಗ್ರಹ ನಡೆಸಿ ಘೋಷಣೆ ಕೂಗಿ ಸಾರ್ವಜನಿಕರು ಪ್ರತಿಭಟನೆ ನಡಿಸಿದರು.

ಈ ವೇಳೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ ಶಿವಕುಮಾರ್ ಮಾತನಾಡಿ ಗ್ರಾಮ ಪಂಚಾಯತಿ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ವಿಪಲವಾಗಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಸಂವಿಧಾನದ ಅಡಿಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿಲ್ಲ ಹಾಗೂ 
ಗ್ರಾಮ ಪಂಚಾಯತಿ ನಿಯಮಗಳನ್ನ ಗಾಳಿಗೆ ತೂರಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಈಗಾಗಲೇ ಸಂಬಂಧ ಪಟ್ಟ ಸಿಇಓ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರು ಕೆಲಸ ಕಾರ್ಯಗಳನ್ನು ಮಾಡದೇ ವಿಳಂಬ ನೀತಿ ದೋರಣೆ ತೋರುತ್ತಿದ್ದಾರೆ ಹಾಗೂ ಹಲವಾರು ಸಾರ್ವಜನಿಕರ ಕೆಲಸಗಳು ಈಗಾಗಲೇ ಬಾಕಿ ಉಳಿದಿದೆ ಎಂದರು.

ಕುದೇರು ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ನೀರು ಸರಿಯಾಗಿ ಹೋಗದೆ ನಿಂತಲ್ಲೇ ನೀರು ನಿಲ್ಲುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬಹುದು ಎಂದು ಗ್ರಾಮ ಪಂಚಾಯತಿ ಪಿಡಿಓ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 
ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕರ ಕೆಲಸ ಮಾಡಿ ಸಾರ್ವಜನಿಕರ ಹಿತಾ ಕಾಪಾಡುವಲ್ಲಿ ಮುಂದಾಗಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವಾದಾಗಿ ಎಚ್ಚರಿಕೆ ನೀಡಿದರು.
   

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಕಿರಣ್ ಕುಮಾರ್ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರು, ಆದರೆ ಪ್ರತಿಭಟನಾಕಾರರು ಕೂಡಲೇ ಸ್ಥಳಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಣ ಅಧಿಕಾರಿಗಳು ಆಗಮಿಸಬೇಕೆಂದು ಪ್ರತಿಭಟನೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣರಾಜ್,  ಮಹದೇವ್,ಮಲ್ಲೇಶ್, ಬಸವರಾಜ್, ಭರತ್, ಪರಶಿವಮೂರ್ತಿ,  ಗಿಡ್ಡಣ್ಣ ಶಿವನಾಗಯ್ಯ,ಚೆನ್ನಮಲ್ಲಯ್ಯ, ಸಂತೋಷ್, ಮಾದಯ್ಯ , ನಾಗರಾಜ್,ಶಿವಮ್ಮ, ಪುಟ್ಟ ನಿಂಗನಿಂಗಮ್ಮ,  ವೇದಾವತಿ ,ನೀಲಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದರು.

ವರದಿ:ಹೊನ್ನೂರು ಪರಮೇಶ್