ಕೊಳ್ಳೇಗಾಲ- ಕೊಳ್ಳೇಗಾಲ ಉಪವಿಭಾಗ ಸೆಸ್ಕಾಂ ಎಇಇ ಎಂ. ರಾಜು ಅವರು ಇದೇ ತಿಂಗಳು ಮಾರ್ಚ್ 31 ರಂದು ವಯೋಸಹಜ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ರಾಜು ಅವರು ಕಳೆದ 2023 ರಂದು ಚಾಮರಾಜನಗರ ದಿಂದ ಕೊಳ್ಳೇಗಾಲಕ್ಕೆ ವರ್ಗಾವಣೆ ಆಗಿ ಬಂದರು. ಕೊಳ್ಳೇಗಾಲದಲ್ಲಿ ಅಧಿಕಾರ ವಹಿಸಿಕೊಂಡ ನಂತರ ವಿದ್ಯುತ್ ಇಲಾಖೆಯಲ್ಲಿ ಹಲವಾರು ಪ್ರಗತಿಯನ್ನು ಮಾಡುವ ಮೂಲಕ ಕೊಳ್ಳೇಗಾಲ ತಾಲೂಕಿನಲ್ಲಿ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಳ್ಳೇಗಾಲ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಜೋತುಬಿದ್ದ ತಂತಿಯನ್ನು ಸರಿ ಮಾಡಿಸುವುದು..ಹಳೇ ಕಬ್ಬಿಣದ ಕಂಬಗಳನ್ನು ಬದಲಾಯಿಸಿ ಹೊಸ ಸಿಮೆಂಟ್ ಕಂಬಗಳನ್ನು ಹಾಕಿಸುವುದು. ಮಳೆಗಾಲದಲ್ಲಿ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಸಮಸ್ಯೆ ಆಗುತ್ತಿದ್ದನ್ನು ನಿಯಂತ್ರಣ ಮಾಡಿದ್ದು..ಕೆಲವು ಹಳ್ಳಿಗಳಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕಿಸಿ ವಿದ್ಯುತ್ ಸಂಪರ್ಕ ಮಾಡಿಸಿದ್ದಾರೆ.
ವಿದ್ಯುತ್ ಶುಲ್ಕ ಬಾಕಿ ಉಳಿಸಿ ಕೊಂಡಿದ್ದ ಸಣ್ಣ ಕೈಗಾರಿಕೆಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳ ಮನೆ ಮನೆಗಳಿಗೆ ಖುದ್ದು ತೆರಳಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಮನವರಿಕೆ ಮಾಡಿ ಇಲಾಖೆಗೆ ಆದಾಯ ಬರುವ ರೀತಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಎರಡು ಕಡೆಗಳಲ್ಲಿ ನೂತನ ಪವರ್ ಸ್ಟೇಷನ್ ನಿರ್ಮಾಣಕ್ಕೆ ಹೆಚ್ಚಿನ ಕಾಳಜಿ ಮತ್ತು ಆಸಕ್ತಿ ವಹಿಸಿ ಗಮನಾರ್ಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೈತಪರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಇವರು ಕೊಳ್ಳೇಗಾಲಕ್ಕೆ ವರ್ಗಾವಣೆ ಆಗಿ ಬಂದ ನಂತರ ರಾಷ್ಟ್ರೀಯ ನಾಯಕರ ಜಯಂತಿ ದಿನಗಳ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಿಸುವ ಮೂಲಕ ಶಾಸಕರಿಂದಲೂ ಪ್ರಶಂಸೆಯನ್ನು ಪಡೆದು ಕೊಂಡಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಪ್ರತಿ ಸಭೆಯಲ್ಲಿ ಪಾಲ್ಗೊಂಡು ವಿದ್ಯುತ್ ಇಲಾಖೆಯ ಪ್ರಗತಿಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಸಮಿತಿಯ ವತಿಯಿಂದ ಎಇಇ ರಾಜು ಅವರಿಗೆ ಸನ್ಮಾನ ಸಹ ಹಮ್ಮಿ ಕೊಳ್ಳಲಾಗಿತ್ತು.
ತಾವು ಮಾರ್ಚ್ 31 ರಂದು ಸೇವೆಯಿಂದ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಎಇಇ ರಾಜು ಅವರು ಇತ್ತೀಚಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ನೌಕರರಿಗೆ, ಸಿಬ್ಬಂದಿಗಳಿಗೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಮಾಜದ ಗಣ್ಯರಿಗೆ ಮತ್ತು ಕುಟುಂಬ ವರ್ಗದವರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣ ಕೂಟದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಕೊಳ್ಳೇಗಾಲ ಕ್ಕೆ ಬಂದ ನಂತರ ಹಾಲಿ ಇಇ ತಬಸ್ಸಮ್ ಬಾನು ಮತ್ತು ಇಲಾಖೆ ಹಿರಿಯ ಅಧಿಕಾರಿಗಳು, ಕ್ಷೇತ್ರದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರ ಸಲಹೆ ಮತ್ತು ಸೂಚನೆ ಯಲ್ಲಿ... ಸಿಬ್ಬಂದಿಗಳು ಮತ್ತು ನೌಕರರ ಸಹಕಾರ ದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
