Ticker

6/recent/ticker-posts

ಗ್ರಾಮೀಣ ಪ್ರದೇಶದ ಹಳ್ಳಿಯ ಬೆಳವಣಿಗೆಗೆ ರಸ್ತೆಗಳು ಪೂರಕ ಸಚಿವ ಚೆಲುವರಾಯಸ್ವಾಮಿ*

ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಬೆಳವಣಿಗೆ ಸಾಧ್ಯ

ನಾಗಮಂಗಲ.  ಗ್ರಾಮೀಣ ಪ್ರದೇಶದ ಹಳ್ಳಿಗಳ  ಅಭಿವೃದ್ಧಿಗೆ ಆಯಾ ಪ್ರದೇಶದ ರಸ್ತೆಗಳು ವ್ಯವಸ್ಥಿತ ಮಾದರಿಯಾಗಿದ್ದಾರೆ ಆ ಗ್ರಾಮಗಳ ಬೆಳವಣಿಗೆಗೆ ಪೂರಕವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ತಿಳಿಸಿದರು.

 ಅವರು  ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳ ಕಾಮಗಾರಿ ಗುದ್ದಲಿ ತಾಲೂಕಿನ ಸಾಮಕಹಳ್ಳಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಗಮಂಗಲ ತಾಲೂಕಿನ ವಿಧಾನಸಭಾ ಕ್ಷೇತ್ರ ಗಳಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಪುರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುವ ಮುಖಾಂತರ ಗ್ರಾಮಗಳ ಅಭಿವೃದ್ಧಿಯ ಪುನಶ್ಚೇತನ ಹಾಗೂ ರಸ್ತೆಗಳ ಉನ್ನತೀಕರಣದಿಂದ ಆ ಗ್ರಾಮಗಳ ಬೆಳವಣಿಗೆಗೆ ಪೂರಕವಾಗಿದ್ದು ತಮ್ಮಗಳ ಆಶೀರ್ವಾದ ಸರಕಾರದ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಹೆಚ್ಚು ಗಮನ ನೀಡುವ ಮುಖಾಂತರ ಗ್ರಾಮಾಂತರ ಪ್ರದೇಶದ ಬೆಳವಣಿಗೆಗೆ  ಆದ್ಯತೆ ನೀಡಲಾಗುವುದು ಎಂದರು.

ಶಾನುಭೋಗನಹಳ್ಳಿ ಕಾಂತಪುರ ರಸ್ತೆ ಮೂರು ಕೋಟಿ. ಸಾಮಕಹಳ್ಳಿ ಹುರುಳಿಗಂಗನಹಳ್ಳಿ ರಸ್ತೆ ನಾಲ್ಕು ಕೋಟಿ.ಚಾಗಟಹಳ್ಳಿ ರಸ್ತೆ 3 ಕೋಟಿ.ಭೀಮನಹಳ್ಳಿ ಮಾವಿನ ಕೆರೆ ರಸ್ತೆ 5 ಕೋಟಿ. ಸುನಗನಹಳ್ಳಿ ಬೊಮ್ಮನಹಳ್ಳಿ ರಸ್ತೆ ಒಂದು ಕೋಟಿ. ಭೀಮನಹಳ್ಳಿ ಅರಸೇಗೌಡನ ಕೊಪ್ಪಲು ರಸ್ತೆ ಒಂದು ಕೋಟಿ. ದೊಡ್ಡಯಗಟಿರಸ್ತೆ 1.50 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ  ಅನುದಾನ ನೀಡುವ ಮುಖಾಂತರ ರಸ್ತೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದರು.

ನನ್ನ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿಯೂ ಹೆಚ್ಚ ಅಭಿವೃದ್ಧಿ ಕೆಲಸ ಮಾಡಿದರು ಕೂಡ ಚುನಾವಣೆಯ ಸಂದರ್ಭದಲ್ಲಿ ಜನರು ಬೇರೆ ರೀತಿಯಲ್ಲಿ ನೋಡುವುದು ಇದಕ್ಕೆ ಏನ್ ಹೇಳಬೇಕೆಂದು ಗೊತ್ತಾಗುವುದಿಲ್ಲ ಎಂದರು.

ಇದೆ ವೇಳೆ ತಾಲೂಕು ದಂಡಾಧಿಕಾರಿ ಆದರ್ಶ ತಾಲೂಕು ಮುಖ್ಯ ಕಾರ್ಯನಿರ್ವಣಧಿಕಾರಿ ಸತೀಶ್ ಸಿಪಿಐ ಹೇಮಂತ್ ಕುಮಾರ್ ಲೋಕೋಪಯೋಗಿ ಇಲಾಖೆ ಹೇಮಾವತಿ ಇಲಾಖೆಯ ಅಧಿಕಾರಿಗಳು ಸುನಿಲ್ ಲಕ್ಷ್ಮಿಕಾಂತ್.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಬಿ.ಎಮ್ ಪ್ರಕಾಶ್ ಮಾವಿನಕೆರೆ ಸುರೇಶ್.ಹುಚ್ಚೇಗೌಡ. ಕೃಷ್ಣೇಗೌಡರು. ಮರಿಸ್ವಾಮಿ.ಹನುಮಂತು. ನರಸಿಂಹ ಮೂರ್ತಿ ಹಾಗೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು