ಕೆ.ಎಂ ದೊಡ್ಡಿ :-ಮದ್ದೂರು ಪಟ್ಟಣದಪುರಸಭೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕೆಂದು ಸಾವಿರಾರು ಜನರು ನನ್ನ ಬಳಿ ಮನವಿ ಮಾಡಿದ್ದರು ಆ ಮನವಿಗೆ ಪೂರಕವಾಗಿ ಮತ್ತು ತಾಲೂಕಿನ ಅಭಿವೃದ್ಧಿಗಾಗಿ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಮದ್ದೂರು ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು,
ನಗರಸಭೆ ರೂಪಿಸಲಾಗಿ ನಮ್ಮ ತಾಲೋಕಿನ ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ, ನಗರಸಭೆ ವ್ಯಾಪ್ತಿಯಿಂದ ಕೆಲವು ಗ್ರಾಮಗಳನ್ನ ಕೈ ಬಿಡಬೇಕು ಎಂದು ಕೆಲವರು ಹೋರಾಟ ನಡೆಸುತ್ತಿದ್ದಾರೆ ಹೋರಾಟ ನಡೆಸಿದರೆ ನಮ್ಮದೇ ಯಾವುದೇ ತಕರಾರು ಇಲ್ಲ, ಹೋರಾಟ ನಡೆಸಲು ಎಲ್ಲರಿಗೂ ಹಕ್ಕಿದೆ ಹೋರಾಟ ನಡೆಸಲಿ ಎಂದು ಮದ್ದೂರು ಶಾಸಕ ಕೆ.ಎಂ ಉದಯ್ ತಿಳಿಸಿದರು.
ಕೆ.ಎಂ ದೊಡ್ಡಿ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 10 ವೆಚ್ಚದಲ್ಲಿ ಶ್ರೀ ವೀರಭದ್ರಶ್ವರ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಕೆ.ಆರ್.ಡಿ.ಎಲ್ ವತಿಯಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸುತ್ತ ದಿನಗಳಲ್ಲಿ ರೈತರ ಮಕ್ಕಳು ಬರಿ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸಲು ಕಷ್ಟಕರವಾಗಿದ್ದು,ಕೃಷಿ ಚಟುವಟಿಕೆಯಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗುತ್ತಿದ್ದು ಕೃಷಿಕರು ಜೀವನ ನಡೆಸಲು ಕಷ್ಟಕರವಾಗಿದ್ದು ,ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ, ಕೃಷಿಯೆತರ ಚಟುವಟಿಕೆಗಳಿಂದ ಉದ್ಯೋಗ ಸೃಷ್ಟಿ ಮಾಡಿ, ತಾಲೂಕಿನ ಜನರ ಅಭಿವೃದ್ಧಿಗಾಗಿ ಕೈಗಾರಿಕೆಗಳನ್ನು ಉತ್ತೇಜಿಸಿ ಅವರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಒದಗಿಸಲು ಹಾಗೂ ಮದ್ದೂರು ತಾಲೋಕನ್ನು ಮಾದರಿ ತಾಲೋಕನ್ನ ಮಾಡುವ ನಿಟ್ಟಿನಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ತಂದು ಹಗಲಿರುಳು ಶ್ರಮಿಸುತ್ತುದ್ದೇನೆ ಎಂದು ತಿಳಿಸಿದರು.
ಬಾಗಲಕೋಟೆ ಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಡುಕೊತ್ತನಹಳ್ಳಿ ಗ್ರಾಮ ನಮ್ಮ ತಾಲೋಕಿನ ದೊಡ್ಡ ಗ್ರಾಮ ಈ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿಡಿದ್ದು ಇತ್ತೀಚಿನ ದಿನಗಳಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದನೆ ಅಲ್ಲದೆ ಗ್ರಾಮದ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ಅನುದಾನ ನೀಡಿದ್ದನೆ .
ನಾನು ರಾಜಕೀಯಕ್ಕೆ ಬರುವ ಮುಂಚೆ ನಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ವ್ ವತಿಯಿಂದ ಶ್ರೀ ವೀರಭದ್ರೇಶ್ವರ ಸಮುದಾಯ ಭವನಕ್ಕೆ ಊಟದ ಟೇಬಲ್ ಗಳು ಹಾಗೂ ಚೇರ್ಗಳನ್ನು ನೀಡಿದ್ದು ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.
ಗ್ರಾಮದ ಪರಿಶಿಷ್ಟ ಜಾತಿಯ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 1 ಕೋಟಿ ವೆಚ್ಚದಲ್ಲಿ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಈಗಾಗಲೇ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು ಹಾಗೆಯೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದನೆ ಶೀಘ್ರದಲ್ಲೆ ಕಾಮಗಾರಿ ಆರಂಭಗೊಳ್ಳುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಹಾಗೂ ಮದ್ದೂರು ತಾಲೋಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಬಸವರಾಜು ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣೂರು ರಾಜೀವ್ ,ಕೆಪಿಸಿಸಿ ಸದಸ್ಯ ಎಸ್. ಚಿದಂಬರ ಮೂರ್ತಿ ಮುಖಂಡರಾದ ಕೇಂಚೆಗೌಡ,ಪುಟ್ಟೇಗೌಡ,ಕಪನಿಗೌಡಕಪನಯ್ಯ ,ಲಕ್ಷಣ ವೀರಭದ್ರ, ಮಾಜಿ ಗ್ರಾಪಂ ಸದಸ್ಯ ಅಧ್ಯಕ್ಷ ಜಯರಾಜು,ಸದಸ್ಯರಾದ ಈ ರುದ್ರಯ್ಯ,ರುದ್ರಯ್ಯ,ನಿವೃತ್ತ ಎಇಇ ಮಹಾದೇವಸ್ವಾಮಿ,ಮರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..
*ವರಧಿ :- ಸಂತೋಷ್ ಟಿಬಿ*
