ಚಾಮರಾಜನಗರ ಮಾರ್ಚ್-೩೦. ಡಿಜಿಟಲ್ ಪರಿವರ್ತನೆ ತರಬೇತಿ ಕಾರ್ಯಕ್ರಮಗಳಿಂದ ಮಹಿಳಾ ಉದ್ಯಮಿಗಳಿಗೆ ಉದ್ಯೋಗದಲ್ಲಿ ಶಕ್ತಿ ನೀಡಲಿದೆ. ಮಹಿಳೆಯರು ಡಿಜಿಟಲ್ ಯುಗಕ್ಕೆ ಪರಿವರ್ತನೆಯಾಗಬೇಕಿದೆ ಎಂದು ಮೈಸೂರಿನ ಸಮನ್ವಯ ಟ್ರಸ್ಟ್ ಸಂಸ್ಥಾಪಕಿ ಮತ್ತು ಸಿ.ಇ.ಒ ಸುಮಂಗಲ ತಿಳಿಸಿದರು.
ನಗರದ ಜೋಡಿರಸ್ತೆಯಲ್ಲಿ ಇರುವ ವರ್ತಕರ ಭವನದಲ್ಲಿ ಸೋಮವಾರ ಯು.ಬಿ.ಯು.ಎನ್.ಟಿಯು ಮಹಿಳಾ ಉದ್ಯಮಿಗಳ ಸಂಘಗಳ ಒಕ್ಕೂಟ, ಕನ್ಸಾರ್ಟಿಯಂ, ಹಿಟಾಚಿ ರೈಲ್ವೇ ಮತ್ತು ಸಮನ್ವಯ ಟ್ರಸ್ಟ್ ಅವರ ಸಹಯೋಗದಲ್ಲಿ ಮಹಿಳೆಯಾರಿಗಾಗಿ ಡಿಜಿಟಲ್ ಪರಿವರ್ತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಮನೆಯಲ್ಲೇ ದುಡಿಯಲು ಅಲವಾರು ಯೋಜನೆಗಳು ಇದೇ. ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಕಾಲ ಬದಲಾಗುತ್ತಿದ್ದಂತೆ ನಾವುಗಳು ಬದಲಾಗಬೇಕು. ಮಹಿಳಾ ಉದ್ಯಮಿಗಳಿಗಾಗಿ ನಮ್ಮ ಟ್ರಸ್ಟ್ ವತಿಯಿಂದ ಡಿಜಿಟಲ್ ಜ್ಞಾನವನ್ನು ತಿಳಿಸಿಕೊಡುವ ಉದ್ದೇಶದಿಂದ ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ಸಂಸ್ಥೆಯಿAದ ತರಬೇತಿ ಪಡೆದ ಹಲವಾರು ಮಹಿಳೆಯರು ಸ್ವಯಂ ಪೇರಿತವಾಗಿ ಡಿಜಿಟಲ್ ಉದ್ಯಮದಲ್ಲಿ ಪರಿಣಿತರಾಗಿದ್ದಾರೆ ಎಂದರು.
ಡಿಜಿಟಲ್ ಪರಿವರ್ತನೆ ತರಬೇತಿ ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ತರಬೇತಿ ಪಡೆದರು. ಅವರಿಗೆ ಸಂಸ್ಥೆಯ ಸಂಸ್ಥಾಪಕರಾದ ಸುಮಂಗಲ ಅವರು ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಸಮನ್ವಯ ಟ್ರಸ್ಟ್ನ ಸದಸ್ಯರಾದ ರಾಜೇಶ್, ಅಂಜಲಿ, ಶೀಲಾ, ರೇಣಿಕಾ ಅವರು ಉಪಸ್ಥಿತರಿದ್ದರು.
