ನಾಗಮಂಗಲ:- ತಾಲೂಕಿನ ಗಂಡುನಿಂಗಿಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ದೈತಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಉತ್ಸವ ಮೂರ್ತಿ ಒತ್ತು ದೇವಿಗೆ ಭಕ್ತಿ ನಮನ ಸಲ್ಲಿಸಿದರು.
ಗ್ರಾಮದಲ್ಲಿ ಮೆರವಣಿಗೆಯ ವೇಳೆ ಭೇಟಿ ಕೊಟ್ಟ ಸಚಿವರು ಉತ್ಸವ ಮೂರ್ತಿಗೆ ಹಗಲು ಕೊಟ್ಟು ಕೆಲ ದೂರ ಮೆರವಣಿಗೆಯಲ್ಲಿ ಸಾಗುವ ಮೂಲಕ ದೇವಿಯ ಆಶೀರ್ವಾದ ಪಡೆದರು.
ಗ್ರಾಮೀಣ ಪ್ರದೇಶ ಜನರು ಇಂದಿಗೂ ಕೂಡ ನಮ್ಮ ಪೂರ್ವಿಕರು ನಡೆಸುತ್ತಿದ್ದ ಹಬ್ಬ ಹರಿದಿನ ದೇವತಾ ಕಾರ್ಯಗಳು ವಿಜೃಂಭಣೆಯಿಂದ ನಡೆಸುವ ಮೂಲಕ ಗ್ರಾಮೀಣ ಸೊ ಗಡಿನ ಪರಂಪರೆ ಮುಂದಿನ ಪೀಳಿಗೆ ಪರಿಚಯಿಸುವ ಕೆಲಸ ನಡೆಯುತ್ತಿರುವುದು ಉತ್ತಮ ಎಂದು ತಿಳಿಸಿದರು.
