ನಾಗಮಂಗಲ.ಜೂ:- 23 ತಾವುಗಳು ತಮ್ಮ ಕೈಲಾದ ಸಮಾಜಕ್ಕೆ ತಮ್ಮಿಂದ ಕೈಲಾದ ಸಹಾಯ ಮಾಡುವ ಮುಖಾಂತರ ಬೇರೆಯವರಿಗೆ ಮಾದರಿಯಾಗಬೇಕೆಂದು ಧಾನಿಗಳಾದ ಶ್ರೀನಿವಾಸ್ ತಿಳಿಸಿದರು.
ಅವರು ನಾಗಮಂಗಲ ತಾಲೂಕಿನ ಕಾಂತಪುರ ಸರ್ಕಾರಿ ಪ್ರೌಢ ಶಾಲೆ ಗೆ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಎಲ್ಲಾ ಮಕ್ಕಳಿಗೆ ಊಟ ಮಾಡಲು ಅಗತ್ಯವಾದ ಕಾರ್ಪೆಟ್ ಅನ್ನು ಶ್ರೀಮತಿ ದಿವಂಗತ ರಂಗನಾಯಕಮ್ಮ ರವರ ಸಹೋದರ ನರಸಿಂಹ ಮೂರ್ತಿ ಹಾಗೂ ಅವರ ಮಗನಾದ ಶ್ರೀನಿವಾಸ್ ಶಾಲೆಯಲ್ಲಿ ಅಗತ್ಯ ವಸ್ತುಗಳನ್ನ ನೀಡುತ್ತಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರಾದ ಶ್ರೀನಿವಾಸ್ ರವರು ಎಲ್ಲಾ ಮಕ್ಕಳಿಗೂ ಕುಡಿಯುವ ನೀರಿನ ಲೋಟವನ್ನು ಕೊಡುಗೆಯಾಗಿ ನೀಡಿದರು.
ಶಾಲೆಯ ಪರವಾಗಿ ದಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.
ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಶ್ರೀಯುತ ಮಂಜುನಾಥ್ ರವರು ಕಾರ್ಪೆಟ್ಟಿನ ಮೇಲೆ ಕುಳಿತ ವಿದ್ಯಾರ್ಥಿಗಳಿಗೆ ಹಾಲನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಎಂ ಎನ್ ಮಂಜುನಾಥ್, ಯೋಗ ಗುರುಗಳಾದ ನಾರಾಯಣಸ್ವಾಮಿ ಅವರು, ದಾನಿಗಳಾದ ನರಸಿಂಹಮೂರ್ತಿ ಹಾಗೂ ಶ್ರೀನಿವಾಸ್ ರವರು
ಹಾಗೂ ಶಿಕ್ಷಕರಾದಫಾ ಜಿಲ್ಲಾ ಬಾನು , ಶಿವಮ್ಮ, ಸೋಮಶೇಖರ, ನೂರ್ ಫಾತಿಮಾ, ಮುರಳಿದರ, ಕೃಪಾ, ನರಸಿಂಹಾಚಾರಿ, ವಿಶಾಕ್, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
