Ticker

6/recent/ticker-posts

*ವಿಶ್ವ ಬಾಲಕಾರ್ಮಿಕ ವಿರೋಧ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ*


ದೇಶದ ಭವಿಷ್ಯ ನಿರ್ಮಾಣ ಪಾತ್ರದಲ್ಲಿ ಯುವಜನತೆಯ ಶಕ್ತಿ ಅಡಗಿದೆ

ನಾಗಮಂಗಲ.ಜೂನ್:- 20 ವಿಶ್ವ ಬಾಲ ಕಾರ್ಮಿಕ ವಿರೋಧ ಕೇವಲ ಸರ್ಕಾರದ ಪಾತ್ರವಲ್ಲದೆ ಸಮಾಜದ ಸಾರ್ವಜನಿಕರ ಸಂಪೂರ್ಣ ಸಹಕಾರದಿಂದ ಬಾಲಕಾರ್ಮಿಕ ವಿರೋಧಿ ಪದ್ಧತಿ ನಿರ್ಮೂಲನ ಮಾಡಲು ಸಾಧ್ಯ ಎಂದು ಸಮಾಜ ವಿಜ್ಞಾನ ಸಂಘದ ಸಂಚಾಲಕರಾದ ಸೋಮಶೇಖರ್ ಅಭಿಪ್ರಾಯ ಪಟ್ಟರು.

ಅವರು ನಾಗಮಂಗಲ ತಾಲೂಕು ಸರ್ಕಾರಿ ಪ್ರೌಢಶಾಲೆ ಕಾಂತಪುರದ ಸ್ವಾಮಿ ವಿವೇಕಾನಂದ ಸಮಾಜ ವಿಜ್ಞಾನ ಸಂಘ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

 ಬಾಲಕಾರ್ಮಿಕತನ ಒಂದು ಸಾಮಾಜಿಕ ಪಿಡುಗು ಮಾತ್ರವಲ್ಲ ದೇಶದ ಭವಿಷ್ಯದ ನಿರ್ಧಾರದಲ್ಲಿ ಯುವ ಜನತೆ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಆದರೆ ಪ್ರಸ್ತುತ ಬಡತನ ಹಾಗೂ ಅನಕ್ಷರತೆಯ ಪರಿಣಾಮ ಹಾಗೂ ಜನಸಂಖ್ಯಾ ಸ್ಫೋಟದ ಕಾರಣದಿಂದಾಗಿ ಬಾಲಕಾರ್ಮಿಕರ ಸಂಖ್ಯೆ ಅಧಿಕವಾಗಿತ್ತು ಅದನ್ನು ಸಂವಿಧಾನಾತ್ಮಕ ಹಾಗೂ ಶಾಸನಾತ್ಮಕ ಕಾನೂನುಗಳು ಮಾತ್ರವಲ್ಲದೆ ಎಲ್ಲಾ ಜನರ ಪ್ರಬಲವಾದ ಇಚ್ಛೆಯು ಬಾಲಕಾರ್ಮಿಕರ ನಿಯಂತ್ರಣದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ್ ರವರು ಸಂವಾದವನ್ನು ನೆಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮುರುಳಿಧರ್ ಶಿವಮ್ಮ ಕೃಪಾ ನರಸಿಂಹಾಚಾರ್ ವಿಶಾಖ 1ನೂರ್ಫಾತಿಮಾ ರವರು ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಸ್ಪೂರ್ತಿ ಸುಪ್ರಿಯ ರಾಣಿ ಭೂಮಿಕ ದೇವಿಕ   ಮಾದೇವ ಮತ್ತಿತರರು ಸಮಾಜದಲ್ಲಿ ಭಾಗವಹಿಸಿದ್ದರು.