ನಾಗಮಂಗಲ. ಜೂ:- 22 ನಾಗಮಂಗಲ ತಾಲೂಕಿನ ಎಲ್ಲಾ ರೈತರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರಯೋಜನ ಪಡೆಯಲು ಇ - ಕೆವೈಸಿ ನೋಂದಣಿ ಮಾಡಿಸಿ ಕೇಂದ್ರದ ಗುರುತು ಸೆಂಟ್ರಲ್ ಐಡಿ ಪಡೆಯುವುದು ಕಡ್ಡಾಯವಾಗಿದೆ ಎಂದು ನಾಗಮಂಗಲ ಸಹಾಯಕ ಕೃಷಿ ನಿರ್ದೇಶಕರಾದ ಹರೀಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ 42711 ರೈತರು ಈಗಾಗಲೇ ನೋಂದಣಿಯಾಗಿದ್ದು 9353 ರೈತರು ಸೆಂಟ್ರಲ್ ಐಡಿ ಗುರುತು ಬಾಕಿ ಇರುವುದರಿಂದ ರೈತ ಬಾಂಧವರು ಈಕೆ ವೈ ಸಿ ಮಾಡಿಸದ ರೈತರು ಪಿಎಂ ಕಿಸಾನ್ ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಇಲ್ಲಿಯವರಿಗೆ ಸೆಂಟ್ರಲ್ ಐಡಿ ಪಡೆಯದ ತಾಲೂಕಿನ ರೈತರು ಹತ್ತಿರದ ಗ್ರಾಮಒನ್ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವ ಮೂಲಕ ಸೆಂಟ್ರಲ್ ಐಡಿ lಪಡೆಯಬಹುದಾಗಿದೆ.
ರೈತರು ಇತ್ತೀಚಿನ ಪಹಣಿ ಪತ್ರ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಒದಗಿಸಿ ಕಡ್ಡಾಯವಾಗಿ ಇ -ಕೆವೈಸಿ ಪೂರ್ಣಗೊಳಿಸಬೇಕೆಂದು ಕೃಷಿ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ
