Ticker

6/recent/ticker-posts

*ಶಿಕ್ಷಣದ ಮಹತ್ವ ಅರಿತು ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕರೆ :ಉದ್ಯಮಿ ಕರಿಗೌಡ*

ಉದ್ಯಮಿ ಉದ್ಯೋಗ ನೀಡಬಹುದು ವಿದ್ಯೆ ನೀಡಲು ಗುರುಗಳೇ ಬೇಕು

 ನಾಗಮಂಗಲ. ಮೇ:-30 ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವ್ಯಾಸಂಗದ ಕಡೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಉದ್ಯಮಿಗಳಾದ ಕರಿಗೌಡರವರು ಕರೆ ನೀಡಿದರು

ಅವರು ಇಂದು ನಾಗಮಂಗಲ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಾಂತಪುರದಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಉದ್ಯಮಿ ಕರಿಗೌಡರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಉದ್ಯಮಿಗಳು ಉದ್ಯೋಗ ನೀಡಬಹುದು ಆದರೆ ವಿದ್ಯೆ ನೀಡಲು ಬ್ರಹ್ಮ ವಿಷ್ಣು ಮಹೇಶ್ವರ ಸ್ವರೂಪವಾದ ಗುರುಗಳೇ ಬೇಕು ಆದಕಾರಣ ಶಿಕ್ಷಣದ ಮಹತ್ವವನ್ನ ಅರಿತು ಸುಶಿಕ್ಷಿತರಾಗಿ ತಮ್ಮ ಭವಿಷ್ಯದ ಗುರಿಯನ್ನು ವಿದ್ಯಾರ್ಥಿ ಜೀವನದಲ್ಲಿ ತಾವುಗಳು ಗುರಿ ಸಾಧನೆಯನ್ನು ನಿರ್ಧರಿಸಿಕೊಂಡು ಅದರಂತೆ ತಾವುಗಳು ಮುಂದೆ ಬರಬೇಕೆಂದು  ಅಭಿನಂದನೆಯನ್ನು ಸ್ವೀಕರಿಸಿದ ಕರಿಗೌಡರು ಹೇಳಿದರು. 
ಈ ಸಂದರ್ಭದಲ್ಲಿ ಶಾಲೆಗೆ ಅಗತ್ಯವಾದ ಜೆರಾಕ್ಸ್ ಮಿಷನ್ ಹಾಗೂ ಇತರ ಪರಿಕರಗಳನ್ನು ನೀಡಲು ಸಿದ್ದ ಎಂದು ಭರವಸೆ ನೀಡಿದರು. ಹಾಗೆಯೇ ಹತ್ತನೇ ತರಗತಿಯಲ್ಲಿ ಶೇಕಡ 95 ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ಧನ ಸಹಾಯ ಮಾಡುವುದರ ಮೂಲಕ ಮುಂದಿನ ವ್ಯಾಸಂಗಕ್ಕೆ ನೆರವಾಗುತ್ತೇನೆ ಎಂದು ಭರವಸೆ ನೀಡಿದರು. 

ಶಾಲೆಯ ಮುಖ್ಯ ಶಿಕ್ಷಕರಾದ ಎಂ ಎನ್ ಮಂಜುನಾಥ್ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಧನಂಜಯ್ ಹಾಗೂ ಸದಸ್ಯರಾದ ಜಯಬರೇಗೌಡ ಹಾಗೂ ಎಲ್ಲಾ ಸಹಶಿಕ್ಷಕ ಮಿತ್ರರಾದ ಸೋಮಶೇಖರ್ ಮುರಳಿಧರ ಶಿವಮ್ಮ ಕೃಪ  ನೂರ್ ಫಾತಿಮಾ ನರಸಿಂಹಾಚಾರ್ ರವರುಗಳು ಉಪಸಿತರಿದ್ದರು