Ticker

6/recent/ticker-posts

*ಶಿಕ್ಷಣ ಎಂಬ ಶಿಖರ ಎತ್ತರದ ಮಾದರಿಯಲ್ಲಿ ಕಲಿಕೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ :ರುದ್ರೇಶ್*


ನಾಗಮಂಗಲ. ಜೂನ್ :-20 ವಿದ್ಯಾರ್ಥಿಗಳು ಶಿಕ್ಷಣ ಎಂಬ ಕಲಿಕೆಯ ಶಿಖರದ ಎತ್ತರಕ್ಕೆ ಬೆಳೆದು ಕಲಿಕೆಯನ್ನು ಮೈಗೂಡಿಸಿಕೊಳ್ಳು ಬೇಕೆಂದು ರುದ್ರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಾಗಮಂಗಲ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಾಂತಪುರದಲ್ಲಿ  ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

 ಕಲಿಕೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು.
ಮಕ್ಕಳು ಸಮಯ ಪಾಲನೆ ಹಾಗೂ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಸಾಧನೆಯ ತುತ್ತ ತುದಿಗೆ ಏರಲು ಹಲವು ಅಡ್ಡಿ ಆತಂಕಗಳು ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಉನ್ನತ ಮಟ್ಟಕ್ಕೆ ಉತ್ತಮ ಯುವ ಜನತೆಯಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು. 
ಸಮಾಜ ಸೇವಕರಾದ ಶಾಂತಕುಮಾರ್ ಶ್ರೀನಿವಾಸಮೂರ್ತಿ ಹಾಗೂ ಸುರೇಶ್ಒಡೆಯರ್ ಅವರು 500 ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. 

ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಮೌಲ್ಯ ಶಿಕ್ಷಣದ ಮಹತ್ವವನ್ನು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟರು ‌
ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಸಾಕ್ಷಿಭೂತರಾದರು.

ಶಾಲೆಯ ಮುಖ್ಯ ಶಿಕ್ಷಕರಾದ ಎಂ ಎನ್ ಮಂಜುನಾಥ್ ರವರು ಹಾಗೂ ಫಾಜಿಲ ಬಾನು ಶಿವಮ್ಮ ಮುರುಳಿದರ ಸೋಮಶೇಖರ್ ನೂರ್ ಫಾತಿಮಾ ವಿಶಾಖ ರವರು ಉಪಸ್ಥಿತರಿದ್ದರು.