Ticker

6/recent/ticker-posts

ಕಾರ್ಮಿಕರ ದಣಿವಿಗೆ ಧ್ವನಿಯಾದ ಚಿದಾನಂದ ಗೌಡ* .

*

ಇಂದು ಶಿರಾ ತಾಲ್ಲೂಕು ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ  ಹಾಗೂ ನಿರಾಶ್ರಿತರಿಗೆ *ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು*  ತಿಳಿಸಿದ ಮಾನ್ಯ  *ಚಿದಾನಂದ ಗೌಡರು*

 ತಾಲ್ಲೂಕು ಜನತೆಯ ಬಗ್ಗೆ ಅಪಾರವಾದ ವಿಶ್ವಾಸದಿಂದ ಎಲ್ಲ ರಂಗಗಳಲ್ಲಿ ಕೌಶಲ್ಯ, ಕ್ರಿಯಾತ್ಮಕ, ಕಲೆಗಳಲ್ಲಿ ಇಚ್ಛಾಶಕ್ತಿಯಿಂದ ಶ್ರಮಿಕ ರಾಗಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರ ತಮ್ಮ ಮಕ್ಕಳ ವಿದ್ಯಾಭ್ಯಾಸ ಶುಭ ಸಮಾರಂಭಗಳಿಗೆ ಅವರ ಜೀವನದ ಬಗ್ಗೆ ಕಷ್ಟಪಟ್ಟು ದಿನವಿಡಿ ಬೆವರು ಸುರಿಸುತ್ತಿದ್ದಾರೆ ಒಂದು ಮೂರ್ತಿ ಮಾಡಬೇಕಾದರೆ ಶಿಲ್ಪಿ ಎಷ್ಟು ಬಾರಿ ಉಳಿಯಿಂದ ಹೊಡೆಯುತ್ತಾನೆ ಹಾಗೆಯೇ ತಮ್ಮ ಮಕ್ಕಳ ಬಗ್ಗೆ ಅಷ್ಟೇ ಆಸಕ್ತಿಯಿಂದ  ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರುಗಳನ್ನು ಸಮಾಜದಲ್ಲಿ ಉನ್ನತ ಪ್ರಜೆಯನ್ನಾಗಿ ಮಾಡೋಣ ಮುಂದೆ ಅವರ ಭವಿಷ್ಯಗಳು ಉಜ್ವಲವಾಗಿರಲಿ ನಿಮ್ಮಗಳ ಕಷ್ಟ ನಿಮ್ಮ  ಮಕ್ಕಳು ಅನುಭವಿಸಬಾರದು ಈ ಕಾರಣಕ್ಕಾಗಿ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ಸರ್ಕಾರಿ ಪ್ರೌಢಶಾಲೆಗೆ ಈಗಾಗಲೇ ನನ್ನ ಅನುದಾನದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ಕಾಮಗಾರಿ ನಡೆಸುವುದಾಗಿ ಹೇಳಿದ್ದೇನೆ .
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ಭವಿಷ್ಯ ನಿಮ್ಮ ನಿಮ್ಮಗಳ ಕೈಯಲ್ಲಿದೆ ಅವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರಚೋದಿಸಿ ಅವರಿಗೆ ಕಷ್ಟ-ಸುಖದ ಅರಿವನ್ನು ಮೂಡಿಸೋಣ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನನ್ನ ಇತಿಮಿತಿಯಲ್ಲಿ ನಿಮ್ಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇನೆ ಗೌರಿ-ಗಣೇಶ ಹಬ್ಬವನ್ನು ಆಚರಿಸಿ ಸನ್ಮಾನ್ಯ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಅಸಂಘಟಿತ ಕಟ್ಟಡ ಕಾರ್ಮಿಕರಿಗೆಂದು ಆಹಾರಧಾನ್ಯಗಳ ಕಿಟ್ಟು ನೀಡಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 70%  ಜನರಿಗೆ ಲಸಿಕೆ ನೀಡಿದೆ ನಿಮ್ಮ ಜೊತೆ ಸರ್ಕಾರ ಯಾವಾಗಲೂ ಇರುತ್ತೆ ನಾನು ಸಹ ನಿಮ್ಮಗಳಿಗೆ ಧ್ವನಿಯಾಗುತ್ತದೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ನಮ್ಮ ಬದುಕನ್ನು ಸಾರ್ಥಕಗೊಳಿಸಿ ಕೊಳ್ಳೋಣ ಗೌರಿ-ಗಣೇಶ ಹಬ್ಬವು ತಮ್ಮೆಲ್ಲರ ಸಂಕಷ್ಟಗಳನ್ನು ನಿವಾರಿಸಲಿ ಜೀವನದಲ್ಲಿ ಹೊಸ ಬೆಳಕು ಚೆಲ್ಲಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ಕೊರೋನಾ ಮುಕ್ತ ಸಮಾಜ ನಿರ್ಮಿಸಿ ಕೊಳ್ಳೋಣ ಎಂದರು.                                                                                                             
ಈ.ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಣ್ಣನವರು   ಉಗಣೇಕಟ್ಟೆ ಎಂ.ಶಿವಲಿಂಗಯ್ಯ ಪ್ರೆಸಿಡೆನ್ಸಿ ಲಿಂಗಣ್ಣ ಮುಖಾಂಡರಾದ ಗೋಪಾಲಪ್ಪ ಕಾಂತರಾಜು ಉದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.