Ticker

6/recent/ticker-posts

*ಯೋಗ್ಯಅಭ್ಯಾಸದಿಂದ ಸಂಜೀವಿನಿ ಯಂತೆ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಕರೆ*

ನಾಗಮಂಗಲ. ಜೂನ್:- 21 ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಇದಕ್ಕೆ ಪ್ರಾಣಾಯಾಮ ಧ್ಯಾನ ಮೌನ ಹಾಗೂ ಯೋಗ ಅತಿ ಅವಶ್ಯಕ ಬಾಲ್ಯದಿಂದಲೂ ದೇಹವನ್ನು ಹಾಗೂ ಮನಸ್ಸನ್ನ ಸದೃಢವಾಗಿ ಇಟ್ಟುಕೊಳ್ಳಲು ಯೋಗ ಅಭ್ಯಾಸವನ್ನು ಚಾಕು ತಪ್ಪದೇ ಮಾಡಬೇಕೆಂದು ಹಿರಿಯ ಯೋಗ ಪಟು ಶ್ರೀ ನಾರಾಯಣಸ್ವಾಮಿ ಅವರು ಅಭಿಪ್ರಾಯಪಟ್ಟರು. 

ಅವರು ಇಂದು ನಾಗಮಂಗಲ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಾಂತಾಪುರ ಶಾಲೆಯ ಪತಂಜಲಿ ಯೋಗ ಮತ್ತು ಧ್ಯಾನ ಮೌಲ್ಯ ಶಿಕ್ಷಣ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸದ ನಾನ ಬಂಗಿಗಳನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. 
ಸ್ವಾಮಿ ವಿವೇಕಾನಂದರು ಅಷ್ಟೊಂದು ಸದೃಢಗೊಳ್ಳಲು ಕಾರಣವಾಗಿದ್ದು ನಿತ್ಯ ಯೋಗ ಅಭ್ಯಾಸ. 
ಇಂದು ಮಾನಸಿಕ ಒತ್ತಡದಿಂದ ಹಾಗೂ ಖಿನ್ನತೆಯಿಂದ ಕೂಡಿರುವ ಜನತೆ ಬಹುಬೇಗ ಹೃದಯ ಬೇನೆ, ಆಸ್ಮ, ರಕ್ತ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಹಾಗೂ ಸಾವಿರಾರು ರೋಗಗಳನ್ನು ಆಸ್ಪತ್ರೆಗಾಗಿ ಖರ್ಚು ಮಾಡುತ್ತಿದ್ದಾರೆ ಆದರೆ ಯೋಗಭ್ಯಾಸ ಹಾಗೂ ನಿಯಮಿತ ವ್ಯಾಯಾಮಗಳು ಆಸ್ಪತ್ರೆಯಿಂದ ದೂರವೇಣಿಸುತ್ತದೆ ಹಾಗೂ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸುತ್ತದೆ ಎಂದು ಮಕ್ಕಳಿಗೆ ಯೋಗಭ್ಯಾಸದ ಮೂಲಕ ತಿಳುವಳಿಕೆ ನೀಡಿದರು. 

ಈ ಸಂದರ್ಭದಲ್ಲಿ ನಾಗಮಂಗಲದ ನರಸಿಂಹಮೂರ್ತಿಯವರು ವಿದ್ಯಾರ್ಥಿಗಳಿವೆ ಅಕ್ಷರ ದಾಸೋಹಕ್ಕಾಗಿ ಬಳಕೆಯಾಗುವಂತೆ ಜಮಕಾನ ಕೊಡುಗೆಯಾಗಿ ನೀಡಿದರು.
ಅತಿಥಿಗಳು ಶಾಲೆಯ ಆವರಣದಲ್ಲಿ ವಿಭಿನ್ನವಾದ ಗಿಡವನ್ನು ನೆಡುವುದರ ಮೂಲಕ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಸ್ಯಗಳ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮುಖ್ಯ ಶಿಕ್ಷಕರಾದ ಎಂ ಎನ್ ಮಂಜುನಾಥ್ ರವರು ಮೌನ ಮತ್ತು ಧ್ಯಾನದ ಮಹತ್ವವನ್ನು ಹಾಗೂ ವಿಶ್ವ ಯೋಗ ದಿನಾಚರಣೆಯ ಉದ್ದೇಶವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. 
ನರಸಿಂಹಾಚಾರಿ ಸೋಮಶೇಖರ್ ಮುರಳಿದರ ಶಿವಮ್ಮ ನೂರ್ ಫಾತಿಮಾ ಫಾಜಿಲಾಬಾನು
ದಾನಿಗಳಾದ ನರಸಿಂಹ ಹಾಗೂ ಶ್ರೀನಿವಾಸ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ವಿದ್ಯಾರ್ಥಿಗಳು ಸಹ ಗುರುಗಳ ಮಾರ್ಗದರ್ಶನದಲ್ಲಿ ನಾನು ಯೋಗದ ಬಂಧುಗಳನ್ನು ಪ್ರದರ್ಶಿಸಿದರು.