ಚಾಮರಾಜನಗರ ಏಪ್ರಿಲ್-೦೨. ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಚಾಮರಾಜಗರದಲ್ಲಿ ವಯೋನಿವೃತ್ತಿ ಹೊಂದಿದ ದ್ವಾರಕೀಶ್.ಅವರನ್ನು ಜಿಲ್ಲಾ ಆರೋಗ್ಯ ಆಧಿಕಾರಿ ಡಾ.ಚಿದಂಬರ.ಎಸ್ ಗೌರವಿಸಿ ಸನ್ಮಾನಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದ ಅದೇಶದಂತೆ ೬೦ವರ್ಷದ ನಂತರ ಸೇವೆಯಿಂದ ನಿವೃತ್ತಿ ಹೊಂದುವುದು ಸಹಜ ದ್ವಾರಕೀಶ್ ಅವರು ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳಾಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಚಾಮರಾಜನಗರ ರವರು ಆರೋಗ್ಯ ಇಲಾಖೆ ಸೇರಿದಂತೆ ೩೫ ವರ್ಷಗಳ ಸೇವೆ ಸಲ್ಲಿಸಿ ಇಲಾಖೆಯಲ್ಲಿ ಉತ್ತಮವಾಗಿ ಸೇವೆಸಲ್ಲಿದ್ದಾರೆ, ಇವರ ನೀವೃತ್ತಿ ಜೀವನವು ಸುಖದಿಂದ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಿಂಗರಾಜು.ಆರ್., ಸಹಾಯಕ ಆಡಳಿತಾಧಿಕಾರಿಗಳು, ಮಂಜುಳ.ಬಿ.ಎಸ್., ಕುಮಾರಿ ಶೋಭಾ.ಎಂ., ಕಚೇರಿ ಅಧೀಕ್ಷಕರು, ಸರ್ಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಚಂದ್ರಶೇಖರ್, ಹಾಗೂ ಪ್ರಥಮ ದರ್ಜೆ ಸಹಾಯಕರು, ಕಿರಣ್.ಎಸ್., ಯೋಗೇಶ್.ಕೆ., ಪ್ರಮೋದ್ ಕುಮಾರ್.ಎಂ., ಮಹದೇವಸ್ವಾಮಿ.ಬಿ.ಎಂ., ಬಿಂದು.ಕೆ.ಎಸ್., ರಾಜೇಶ್ವರಿ, ದ್ವಿತೀಯ ದರ್ಜೆ ಸಹಾಯಕರು ಹಾಗೂ ಮುಬಾರಕ್ ಪಾಷ, ನಂಜುoಡಸ್ವಾಮಿ ರವರು ಭಾಗವಹಿಸಿದ್ದರು.
