Ticker

6/recent/ticker-posts

*ಶ್ರಾವಣ ಮಾಸದಲ್ಲಿ ಸಚಿವರ ಸಂಕಲ್ಪ ನುಡಿದಂತೆ ನಡಿಗೆಸಾಕ್ಷಿ: ಚೆಲುವರಾಯಸ್ವಾಮಿ*

ಪ್ರತಿ ಶನಿವಾರದ ಕ್ಷೇತ್ರದ ಜನತೆಯ ಸಮಸ್ಯೆಗೆ ಸ್ಪಂದನೆ 

ನಾಗಮಂಗಲ. ಆ:- 22 ಸಚಿವರಾಗಿ ಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಕ್ಷೇತ್ರದಲ್ಲಿ ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೂ ಇದ್ದು ಸಾರ್ವಜನಿಕರ ಕ್ಷೇತ್ರದ ಸಮಸ್ಯೆಗಳಿಗೆ ಸದಾ ಭಾಗಿಯಾಗಿರುತ್ತೇನೆ ಎಂದು ಸಚಿವ ಚಲಾಯಿಸುವವರು ನುಡಿದಂತೆ ನಡೆದಿದ್ದಾರೆ.

ಅವರು ಇಂದು ನಾಗಮಂಗಲದಲ್ಲಿ ಸಚಿವ ಚೆಲುವರಾಯ ಸ್ವಾಮಿಯವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರತಿಶನಿ ವಾರದ ಸಂಕಲ್ಪಕ್ಕೆ  ಶ್ರಾವಣ ಮಾಸದ ದಿನದಂದು ಅಧಿಕೃತವಾಗಿ ಚಾಲನೆ ನೀಡುವ ಮುಖಾಂತರ ನುಡಿದಂತೆ ನಡೆದ ಹೆಜ್ಜೆಗೆ ಇಂದು ಸಾಕ್ಷಿಯಾಗಿದ್ದಾರೆ ರಾಜ್ಯದ ಪ್ರಮುಖ ಖಾತೆ ಹೊಂದಿದ್ದು ರಾಜ್ಯದ ಜ್ವಾಲoತ ಸಮಸ್ಯೆಗಳು ಇದ್ದರು ಬಿಡುವು ಮಾಡಿಕೊಂಡು ಕ್ಷೇತ್ರದ ಹಾಗೂ ಸಾರ್ವಜನಿಕರ ಸಮಸ್ಯೆ ಕುಂದು ಕೊರತೆ ಕ್ಷೇತ್ರದ ಅಭಿವೃದ್ಧಿ ಹೆಜ್ಜೆಗೆ ಹೊಸ ಸಂಕಲ್ಪಕ್ಕೆ ಮುನ್ನುಡಿಯಾಗಿದ್ದಾರೆ.
ಕ್ಷೇತ್ರಕ್ಕೆ ಇಂದು ಆಗಮಿಸಿ ಕ್ಷೇತ್ರದ ಹಾಗೂ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆಗಳನ್ನ ಚರ್ಚಿಸಿ ಕ್ಷೇತ್ರದ ಹಲವಾರು ಅಭಿವೃದ್ಧಿ ಯೋಜನೆಗಳ ಚಾಲನೆಗೆ ಇದೇ ಸಂದರ್ಭದಲ್ಲಿ ಭಾಗಿಯಾದರು.

ನಾಗಮಂಗಲ ಪಟ್ಟಣದ ಅರಣ್ಯ ಇಲಾಖೆಯ ವಸತಿಗೃಹ ಉದ್ಘಾಟನೆ ಹಾಗೂಮಾಯಣ್ಣಗೌಡನಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ.ಅಲ್ಪಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ. ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಅಪ್ಪಾಜಿಗೌಡ. ಲಕ್ಷ್ಮೀನಾರಾಯಣ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜೆ. ರಾಜೇಶ್.ಸುನಿಲ್ ಲಕ್ಷ್ಮಿಕಾಂತ್. ಆರ್ ಕೃಷ್ಣೆಗೌಡ.ಜಯಸ್ವಾಮಿ ಕೃಷ್ಣೆಗೌಡ.ಶರತ್.ಪವಿ. ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಖಂಡರುಗಳು ಹಾಜರಿದ್ದರು