ಕೆ.ಆರ್.ಪೇಟೆ: ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ಕೆ.ಆರ್.ಪೇಟೆ ತಾಲ್ಲೂಕು ನೂತನ ಅಧ್ಯಕ್ಷರಾಗಿ ಗಂಜಿಗೆರೆ ಮಹೇಶ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ, ಕೆ.ಆರ್.ಪೇಟೆ ತಾಲ್ಲೂಕು ಜೈ ಭುವನೇಶ್ವರಿ ಕಲಾ ಸಂಘ ಹಾಗೂ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ಪಟ್ಟಣದ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಕಚೇರಿಯಲ್ಲಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಜೈ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚಟ್ಟೇನಹಳ್ಳಿ ನಾಗರಾಜು ಅವರು, ಗಂಜಿಗೆರೆ ಮಹೇಶ್ ಅವರು ಚಿಕ್ಕ ವಯಸ್ಸಿನಲ್ಲೇ ಪತ್ರಕರ್ತರಾಗಿ ಪ್ರಾಮಾಣಿಕ ವರದಿಗಳ ಮೂಲಕ ಎಲ್ಲರ ವಿಶ್ವಾಸ ಗಳಿಸಿ ಜವಾಬ್ದಾರಿಯುತ ಸ್ಥಾನ ಅಲಂಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜ ತಿದ್ದುವ ಕೆಲಸ ಮಾಡುವುದರ ಜೊತೆಗೆ ಪತ್ರಕರ್ತರ ಬಳಗದ ಅಭಿವೃದ್ಧಿಗೆ ಶ್ರಮಿಸಲಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಉನ್ನತ ಸ್ಥಾನ ದೊರಕಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ.ರಾಜ್ ರಂಗ ಕಲಾ ವೇದಿಕೆಯ ಗೌರವಾಧ್ಯಕ್ಷ ತಾಂಡ್ರೆಕೊಪ್ಪಲು ಮಂಜುನಾಥ್, ತಾಲ್ಲೂಕು ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಮಹಾದೇವೇಗೌಡ, ಗ್ರಾ.ಪಂ ಸದಸ್ಯ ಆರ್.ವಿಜಯಕುಮಾರ್, ಪತ್ರಕರ್ತರಾದ ರಘು ಹೊಸಹೊಳಲು, ಕಾಮನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ಸುದ್ದಿ:- ಮನು ಮಾಕವಳ್ಳಿ ಕೆ ಆರ್ ಪೇಟೆ*
