ಪ್ರಮುಖ ರಸ್ತೆಯಲ್ಲಿ ಗುಡಿಗೆರೆ ಬಳಿ ಇರುವ ಸೇತುವೆಯೂ ಬಹಳ ಕಿರಿದಾಗಿರುವುದರಿಂದ ಹಾಗಾಗೆ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು,ನಾನು ಈ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಆ ಮನವಿಗೆ ಪೂರಕವಾಗಿ ಈಗಿರುವ ನೆಲಸಮಗೊಳಿಸಿ ಈ ಹಿಂದೆ ಇದ್ದ ಸೇತುವೆಗಿಂತ ಮೂರು ಪಟ್ಟು ದೊಡ್ಡದಾದ ನೂತನ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಯನ್ನು ನಿರ್ಮಾಣ ಮಾಡಿ ಈ ಭಾಗದ ಜನರ ಬಹುದಿನದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳುತ್ತದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ಕೆ.ಎಂ ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ₹3 ಕೋಟಿ ವೆಚ್ಚದಲ್ಲಿ ಕೆ.ಬಿ ರಸ್ತೆಯಿಂದ ಗುಡಿಗೆರೆ ಭುಜುವಳ್ಳಿ ಮಾರ್ಗ ಮಳವಳ್ಳಿ ತಾಲೋಕು ಗಡಿ ಸೇರುವ 1.45 ಕಿ.ಮೀರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಭಾಗದ ಜನರ ಸಂಚಾರಕ್ಕೆ ರೈತರಿಗೆ ಅನುಕೂಲವಾಗುವಂತೆ ವಿಶಾಲವಾದ ಸೇತುವೆ ನಿರ್ಮಾಣವಾಗಲಿದ್ದು, ಸೇತುವೆ ನಿರ್ಮಾಣದ ಜೊತೆಗೆ ರೈತರಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಜಮೀನುಗಳಿಗೆ ನೀರು ಹರಿಯಲು ಶಾಶ್ವತವಾದ ಬಾಕ್ಸ್ ಡ್ರೈನ್ ವ್ಯವಸ್ಥೆಯನ್ನು ಸೇತುವೆಯ ಜೊತೆಜೊತೆಯಲ್ಲಿಯೇ ನಿರ್ಮಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು
ಮೂರು ಕೋಟಿ ವೇಚ್ಛದಲ್ಲಿ ನಿರ್ಮಾಣವಾಗಿತ್ತಿರುವ ಈ ಸೇತುವೆಯು ಯಲಾದಹಳ್ಳಿ, ಬಿದರಹಳ್ಳಿ, ಅರೆಚಾಕನಹಳ್ಳಿ, ಶೇಟ್ಟಹಳ್ಳಿ, ಕರಡಕೆರೆ, ಕಾಡುಕೊತ್ತನಹಳ್ಳಿ ಮತ್ತು ಭುಜವಳ್ಳಿ ಮೂಲಕ ಮಳವಳ್ಳಿ ಗಡಿಯವರೆಗೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ರಸ್ತೆಯಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.
ರಸ್ತೆ ಮತ್ತು ಸೇತುವೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ರೈತರು ಮತ್ತು ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಸಹಕರಿಸಬೇಕು. ಹಲವು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬರುತ್ತಿರುವ ಕಾರಣ ಕೆಲವರಿಗೆ ತಮ್ಮ ಜಮಿನಿನ ನಿಖರ ಗಡಿ ಅರಿವಿರುವುದಿಲ್ಲ. ರಸ್ತೆ ಅಭಿವೃದ್ಧಿಗೆ ಅಗತ್ಯವಿದ್ದರೆ ರೈತರು ಒಂದೆರಡು ಅಡಿ ಜಾಗ ಬಿಟ್ಟುಕೊಟ್ಟರೆ, ಅವರ ಜಮೀನಿನ ಮೌಲ್ಯ ದ್ವಿಗುಣಗೊಳ್ಳಲಿದೆಯೇ ಹೊರತು ಯಾರಿಗೂ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಹಂತ ಹಂತವಾಗಿ ನೀರಾವರಿ ಹಾಗೂ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು
ಕ್ಷೇತ್ರದಲ್ಲಿ ಈಗಾಗಲೇ ನೀರಾವರಿ ಇಲಾಖೆಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡು ಕೆಲವು ಪ್ರಗತಿಯಲ್ಲಿದ್ದು ಇನ್ನೂ ಕೆಲವು ಮುಕ್ತಾಯದ ಹಂತದಲ್ಲಿವೆ ಎಂದು ತಿಳಿಸಿದರು.
,ಮದ್ದೂರು ತಾಲೋಕಿನ ಒಣ ಭೂಮಿ (ಡ್ರೈಲ್ಯಾಂಡ್) ಭಾಗಕ್ಕೂ ನೀರು ತಲುಪಿಸಲು ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಇನ್ನೊಂದು ವರ್ಷದಲ್ಲಿ ಈ ಎಲ್ಲಾ ಕೆಲಸಗಳು ಪೂರ್ಣಗೊಂಡು ಎಲ್ಲರಿಗೂ ಕಾಲಮಿತಿಯಲ್ಲಿ ನೀರು ಸಿಗಲಿದೆ ಎಂದು ಭರವಸೆ ನೀಡಿದರು.
ನಮ್ಮ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಅಭಿವೃದ್ಧಿಯ ದೂರಾಲೋಚನೆಯನ್ನಿಟ್ಟುಕೊಂಡಿರುವ ಚಲನಶೀಲ ನಾಯಕರು ಅವರ ಅಭಿವೃದ್ಧಿ ಚುರುಕುತನಕ್ಕೆ ತಕ್ಕಂತೆ ನಾವೂ ಅವರ ವೇಗಕ್ಕೆ ತಕ್ಕಂತೆ ಸ್ಪೀಡ್ ಆಗಿ ಕೆಲಸ ಮಾಡಬೇಕಿದೆ,ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆಗೂಡಿ ಮದ್ದೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಶ್ರಮಿಸುತ್ತಿದ್ದೇನೆ
ಮುಂಬರುವ ಮೂರು-ನಾಲ್ಕು ತಿಂಗಳುಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು, ತಾಲೋಕಿನ
ಜನರ ನಿರಂತರ ಪ್ರೀತಿ ಮತ್ತು ಸಹಕಾರವಿದ್ದರೆ ಇನ್ನೂ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದಾಗಿ ಶಾಸಕರು ತಿಳಿಸಿದರು.
ಇದೆ ಸಂದರ್ಭದಲ್ಲಿ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು,ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಚಲುವರಾಜು ,ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ,ಭಾರತಿನಗರ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಮುಖಂಡರಾದ ದಾಸೆಗೌಡ ,ಹನುಮೇಗೌಡ,ಚಿಕ್ಕಹನುಮೇಗೌಡ,ಪ್ರೊ.ಬೊರೇಗೌಡ,ಗುಡಿಗೆರೆ ಪ್ರಸಾದ್,ಪೂಜಾರಿ ಮಹೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ:- ಸಂತೋಷ್ ಟಿಬಿ
