*ಕೆ.ಎಂ ದೊಡ್ಡಿ :-ಮದ್ದೂರು ತಾಲೂಕಿನ ಶೈಕ್ಷಣಿಕ ಪ್ರಗತಿಗಾಗಿ ಕಳೆದ ಐದು ವರ್ಷಗಳಿಂದ ನಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು ಕ್ಷೇತ್ರದ ಜನರ ಇಚ್ಛೆಯಂತೆ ಕ್ಷೇತ್ರದ ಶಾಸಕನಾದ ಮೇಲೆ ಕ್ಷೇತ್ರದಲ್ಲಿನ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದನೆ , ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಈಗಾಗಲೇ ನಾಲ್ಕೈದು ಕೆಪಿಎಸ್(KPS) ಶಾಲೆಗಳನ್ನು ಮಂಜೂರು ಮಾಡಿಸಿ ತರಲಾಗಿದ್ದು ವಿದ್ಯಾರ್ಥಿಗಳ ಹೆಚ್ಚಿನ ಅವಕಾಶಗಳನ್ನು ಕಲ್ಪಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಾಲೋಕಿನಾದಾದ್ಯಂತ 5 ಹೈಟೆಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶೀಘ್ರದಲ್ಲೇ ಕಾರ್ಯರೂಪಕ್ಕೆ ತಂದು ಹೈಟೆಕ್ ಶಾಲೆಗಳನ್ನು ತೆರದು ಆ ಶಾಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿತು, ಉನ್ನತ ಶಿಕ್ಷಣ ಪಡೆದು,ಭವಿಷ್ಯದಲ್ಲಿ ದೇಶ ಕಟ್ಟುವ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಮದ್ದೂರು ಶಾಸಕ ಕೆ.ಎಂ ಉದಯ್ ತಿಳಿಸಿದರು.
ಕೆ.ಎಂ ದೊಡ್ಡಿ ಸಮೀಪದ ಬೀದರಹೊಸಹಳ್ಳಿ ಗ್ರಾಮದಲ್ಲಿ ಸುಮಾರು 29 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು
ಕಳೆದ ನಾಲ್ಕುವರೆ ವರ್ಷಗಳ ಸಮಾಜ ಸೇವೆಯ ಅವಧಿಯಲ್ಲಿ ನಮ್ಮ ಟ್ರಸ್ಟ್ ಮೂಲಕ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಸಹಾಯಸ್ತ ನೀಡಿ ತಾಲೂಕಿನ ಅಳಿವಿನಂಚಿನಲ್ಲಿದ್ದ ಶಾಲೆಗಳ ಉನ್ನತಿಗೆ ಹಲವಾರು ಸೇವೆಗಳನ್ನು ಟ್ರಸ್ಟ್ ಮೂಲಕ ನಿರಂತರವಾಗಿ ನಿರ್ವಹಿಸುತ್ತಾ ಬಂದಿದ್ದೇವೆ ಅಲ್ಲದೆ ಶಾಸಕನಾಗಿ ಆಯ್ಕೆಯಾದ ಮೇಲೆಯೂ ಸಹ ಟ್ರಸ್ಟ್ ಮೂಲಕ ಸಮಾಜ ಸೇವೆಯನ್ನು ಮುಂದಿವರಿಸುತ್ತ ಬಂದಿದ್ದೂ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿ ವೆಚ್ಚ ,ಉಚಿತ ಬ್ಯಾಗ್ ಗಳು ನೋಟ್ ಬುಕ್ ಗಳು ಕ್ರೀಡಾ ಪರಿಕರಗಳ ವಿತರಣೆಗಳಂತ ಸಮಾಜ ಸೇವೆಗಳನ್ನ ಮುಂದುವರಿಸುತ್ತಾ ಬಂದಿದ್ದವೆ
ತುರ್ತು ಅಗತ್ಯತೆಯ ಮೇರೆಗೆ ಸುಣ್ಣದದೊಡ್ಡಿ ಗ್ರಾಮದ ಶಾಲೆಗೆ 2 ಕೊಠಡಿಗಳು, ಅರುವನಹಳ್ಳಿ ಗ್ರಾಮದಲ್ಲಿ 2 ಕೊಠಡಿಗಳು ಮತ್ತು ನೀಡಘಟ್ಟ ಗ್ರಾಮದಲ್ಲಿ 5 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.
ಶಿಕ್ಷಣವೇ ಅತ್ಯಮೂಲ್ಯ ಆಸ್ತಿಯಾಗಬೇಕು ಈ ಹಿಂದೆ ಪೋಷಕರು ಹಣ ಮತ್ತು ಆಸ್ತಿ ಸಂಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಾವಶ್ಯಕ. ಜಗತ್ತಿನಲ್ಲಿ ಯಾರೂ ಕದ್ದುಕೊಳ್ಳಲಾಗದ ಏಕೈಕ ಆಸ್ತಿ ವಿದ್ಯೆ ಮಾತ್ರ ಈ ನಿಟ್ಟಿನಲ್ಲಿ ಪೋಷಕರು ಶಿಕ್ಷಣ ಹೆಚ್ಚಿನ ಮನ್ನಣೆ ನೀಡಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಹಾಗೆಯೇ ಮಕ್ಕಳು ಉತ್ತಮ ಶಿಕ್ಷಣ ಸುಶಿಕ್ಷಿತರಾಗಿ ಪ್ರತಿಭಾವಂತರಾಗಬೇಕು
ಸರ್ಕಾರಿ ಶಾಲೆಗಳ ಮಹತ್ವ ಅತ್ಯಾಮೂಲ್ಯವಾದುದಾಗಿದೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು ದೇಶದ ಪ್ರಧಾನಿ, ಮುಖ್ಯಮಂತ್ರಿಗಳಂತಹ ಉನ್ನತ ಸ್ಥಾನಗಳಿಗೇರಿದ್ದಾರೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ಇದೆ ಸಂದರ್ಭದಲ್ಲಿ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು ,ಬಿಇಓ ಧನಂಜಯ, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಚಲುವರಾಜು,ನಿರ್ದೇಶಕ ಸಂದರ್ಶ, ಎಸ್.ಡಿ.ಎಸ್.
ಎಂಸಿ ಅಧ್ಯಕ್ಷ ಕೃಷ್ಣ,ಅಮೀನ್ ಶಿವಲಿಂಗಯ್ಯ,ಪ್ರೊ ಬಿ ಬೊರೇಗೌಡ ಪ್ರೇಮ್ ಕುಮಾರ್ ,ಕಿರಣ್ ಕುಮಾರ ,ಶಾಲಾ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ವರಧಿ :- ಸಂತೋಷ್ ಟಿಬಿ*
