ನಾಗಮಂಗಲ : ಕದಬಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಓಕಿನಾವ ಇಂಡಿಪೆಂಡೆನ್ಸ್ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಓಕಿನಾವ ಶೊರಿನ್ ಆರ್ ವೈ ಯು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಲೆಯ ೬೩ ವಿದ್ಯಾರ್ಥಿಗಳು ಸಹ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ಶಿಪ್ ಟ್ರೋಫಿ ಪಡೆದುಕೊಂಡರು.
ತರಬೇತುದಾರರಾದ ಭಾರತಿರವರು ಗ್ರಾಮೀಣ ಭಾಗದ ಈ ಮಕ್ಕಳು ನಗರ ಪ್ರದೇಶದ ಮಕ್ಕಳೊಂದಿಗೆ ಸೆಣಸಿ ಗೆಲುವು ಸಾಧಿಸಿದ್ದು ನಿಜಕ್ಕೂ ಶ್ಲಾಘನೀಯವೆಂದರು. ವಿದ್ಯಾರ್ಥಿಗಳ ಗೆಲುವಿಗೆ ಬೆನ್ನೆಲುಬಾಗಿ ನಿಂತ ಪ್ರಾಂಶುಪಾಲರು ಮತ್ತು ಶಿಕ್ಷಕರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಪ್ರಾಂಶುಪಾಲರಾದ ಜಿ ಬಿ ಅನಿತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು. ಶಿಕ್ಷಕರಾದ ಮಂಜುನಾಥ್ ನಾಯ್ಕ್, ಕೌಶಿಕ್ ಟಿ ವಿ, ಶಿವಾನಂದ ಸ್ವಾಮಿ, ಶ್ರೀನಿವಾಸ ಮೂರ್ತಿ, ಮನೋಜ್, ರಮ್ಯಾ,ಹೇಮಲತ ಇದ್ದರು.
