Ticker

6/recent/ticker-posts

*ತಮಿಳುನಾಡು ಬೆಂಬಲದೊಂದಿಗೆ 6-8 ತಿಂಗಳಲ್ಲಿ ಮೇಕೆದಾಟುಗೆ ಶಂಕುಸ್ಥಾಪನೆ*


*177.25 ಟಿಎಂಸಿ ಕೊಡ್ತೀವಿ, 300 ಟಿಎಂಸಿ ಸಮುದ್ರಕ್ಕೆ ಹೋಗಿದ್ದು ತಡೆಯಲು ಮೇಕೆದಾಟು ಅಗತ್ಯ: ಸಚಿವ ಚಲುವರಾಯಸ್ವಾಮಿ"*

*ಬೆಂಗಳೂರು, ಆ,27:ಖಾಸಗಿ ವಾಹಿನಿಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ , ಜಲಸಂಪನ್ಮೂಲ ಸಚಿವ *ಎನ್. ಚಲುವರಾಯಸ್ವಾಮಿ ಅವರು ಕಾವೇರಿ ಬಿಕ್ಕಟ್ಟು, ಮೇಕೆದಾಟು ಮತ್ತು ಹೂಳು ತೆರವು ಕುರಿತು ಸಚಿವರು ಮುಕ್ತವಾಗಿ ಮಾತನಾಡಿದರು.

 6 ರಿಂದ 8 ತಿಂಗಳಲ್ಲಿ  ಮೇಕೆದಾಟುಗೆ ಶಂಕುಸ್ಥಾಪನೆ

"ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ ಮೇಕೆದಾಟು. ಕಾನೂನು ಮತ್ತು ಅರಣ್ಯ ಅನುಮತಿ ಪ್ರಗತಿಯಲ್ಲಿದೆ. *ಮುಂದಿನ 6 ರಿಂದ 8 ತಿಂಗಳೊಳಗೆ ಯೋಜನೆಗೆ ಶಂಕುಸ್ಥಾಪನೆ ಮಾಡೇ ಮಾಡುತ್ತೇವೆ.* 12,500 ಎಕರೆ ಅರಣ್ಯ ಜಮೀನಿಗೆ ಬದಲಾಗಿ 13 ಜಿಲ್ಲೆಗಳಲ್ಲಿ 20,000 ಎಕರೆ ಗುರುತಿಸಲಾಗಿದೆ. ಈ ತಿಂಗಳಲ್ಲಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ, ಡಿಎಫ್‌ಓಗಳ ಸಭೆ ನಡೆಸಿ ಫಾರೆಸ್ಟ್ ಕ್ಲಿಯರೆನ್ಸ್‌ಗೆ ವೇಗ ನೀಡುತ್ತೇವೆ" ಎಂದು ಸಚಿವರು ಹೇಳಿದರು.

*ತಮಿಳುನಾಡು ಸಿಎಂ ವಿಜಯ್ ಜೊತೆ ಮಾತುಕತೆಗೆ ಸಿದ್ಧ:*
"ಕಾವೇರಿ ವಿವಾದವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಸುಪ್ರೀಂ ಕೋರ್ಟ್ ಕುಡಿಯುವ ನೀರಿಗೆ ಯಾರೂ ಅಡ್ಡಿ ಮಾಡಬಾರದು ಎಂದು ಹೇಳಿದೆ. ತಮಿಳುನಾಡಿನಲ್ಲಿ ಈಗ ವಿಜಯ್ ಅವರು ಮುಖ್ಯಮಂತ್ರಿಯಾದ ಮೇಲೆ ಮೇಕೆದಾಟು ಬಗ್ಗೆ ಸಾಫ್ಟ್ ಆಗಿದ್ದಾರೆ. *ತಮಿಳುನಾಡು ಬೆಂಬಲದೊಂದಿಗೆ ಮೇಕೆದಾಟು ಮಾಡುತ್ತೇವೆ.* ನಾನೇ ಚೆನ್ನೈಗೆ ಹೋಗಿ ಭೇಟಿ ಮಾಡಿ ಕನ್ವಿನ್ಸ್ ಮಾಡಲು ಸಿದ್ಧ" ಎಂದು ಸಚಿವರು ಹೇಳಿದರು.

*ಕಾವೇರಿ ನಿರ್ವಹಣೆ - 177.25 ಟಿಎಂಸಿ:*

"ಟ್ರಿಬ್ಯುನಲ್ ತೀರ್ಪಿನಂತೆ ನಾವು ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕು. ಆದರೆ ಮಳೆಗಾಲದಲ್ಲಿ 300 ಟಿಎಂಸಿ ವರೆಗೆ ನೀರು ಹರಿದು ಸಮುದ್ರಕ್ಕೆ ಹೋಗುತ್ತದೆ. ಅದನ್ನು ತಡೆದು *66 ಟಿಎಂಸಿ ಸಂಗ್ರಹಿಸಲು ಮೇಕೆದಾಟು ಅತ್ಯಗತ್ಯ.* ಇದರಲ್ಲಿ ನಮಗೆ 10-20 ಟಿಎಂಸಿ ಕುಡಿಯುವ ನೀರಿಗೆ ಮಾತ್ರ, ಉಳಿದ ನೀರು ಅವರಿಗೇ ಹೆಚ್ಚು ಉಪಯೋಗ. ಅವರು ತಪ್ಪು ಮಾಹಿತಿಯಿಂದ ಗೊಂದಲ ಮಾಡಿಕೊಂಡಿದ್ದಾರೆ" ಎಂದು ಸಚಿವರು ವಿವರಿಸಿದರು.

*ಹೂಳು ತೆರವು - ಖಾಸಗಿ ಏಜೆನ್ಸಿ:*

"ಸ್ವಾತಂತ್ರ್ಯದ ನಂತರ *ಕೆಆರ್‌ಎಸ್ ಮತ್ತು ತುಂಗಭದ್ರಾ* ಜಲಾಶಯಗಳಲ್ಲಿ ಹೂಳು ತೆಗೆದಿಲ್ಲ, ಶೇಖರಣಾ ಸಾಮರ್ಥ್ಯ ಕುಸಿದಿದೆ. ಪ್ರೈವೇಟ್ ಏಜೆನ್ಸಿಗಳು ಮುಂದೆ ಬಂದಿವೆ. ಅವರು ಹೂಳನ್ನು ತೆಗೆದು ರಾಯಲ್ಟಿ ಕೊಟ್ಟು ಮರಳು, ಇಟ್ಟಿಗೆಗಳಾಗಿ ಬೈ-ಪ್ರಾಡಕ್ಟ್ ಮಾಡುವ ಬಗ್ಗೆ ಎಸಿಎಸ್ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ" ಎಂದರು.

*ಮಹದಾಯಿ / ಕಳಸಾ-ಬಂಡೂರಿ - ಸಮಸ್ಯೆಯೇ ಇಲ್ಲ:*

"ಕಳಸಾ-ಬಂಡೂರಿ ಕುಡಿಯುವ ನೀರಿಗೆ 3.2 ಟಿಎಂಸಿ ಹಂಚಿಕೆಯಾಗಿದೆ, ಕೃಷಿಗೆ ಅಲ್ಲ. ಇದು ಫಾರೆಸ್ಟ್ ಇಶ್ಯೂ ಮಾತ್ರ. ಕೇಂದ್ರ ಸಚಿವ *ಪ್ರಲ್ಹಾದ್ ಜೋಶಿ* ಅವರೊಂದಿಗೆ ಚರ್ಚಿಸಿ ಒಂದು ತಿಂಗಳಲ್ಲಿ ಬಗೆಹರಿಸಬಹುದು. ಜೋಶಿ ಅವರ ರಾಜಕೀಯ ಜೀವನ ಶುರುವಾಗಿದ್ದೇ ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರಿಗಾಗಿ" ಎಂದು ಹೇಳಿದರು.

 *ಕೇಂದ್ರದಿಂದ 15,000 ಕೋಟಿ ಬಾಕಿ:*

"ಬೊಮ್ಮಾಯಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾದ *ಅಪ್ಪರ್ ಭದ್ರಾಗೆ 5,000 ಕೋಟಿ*, ಬೆಂಗಳೂರಿಗೆ 5,000 ಕೋಟಿ ಮತ್ತು ಮಹದಾಯಿಗೆ 5,000 ಕೋಟಿ ಸೇರಿ 15,000 ಕೋಟಿ ಬಾಕಿ ಇದೆ. ಕೇಂದ್ರದ ನಾಲ್ವರು ಸಚಿವರು ಜೋಶಿ, ಸೋಮಣ್ಣ, ಕುಮಾರಸ್ವಾಮಿ, ಶೋಭಾ ಅವರು ಪ್ರಧಾನಿಯವರ ಬಳಿ ಮಾತನಾಡಿ ತರಬೇಕು. ಅಭಿವೃದ್ಧಿ ವಿಷಯದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು" ಎಂದು ಸಚಿವರು ಹೇಳಿದರು.