Ticker

6/recent/ticker-posts

ಪಿ.ಜಿ.ಪಾಳ್ಯದ ಸಹಕಾರ ಸಂಘದಲ್ಲಿ ₹30 ಲಕ್ಷ ಕೆ.ಸಿ.ಸಿ. ಬೆಳೆ ಸಾಲ ವಿತರಸಿದ : ಮಾಜಿ ಶಾಸಕ ಆರ್. ನರೇಂದ್ರ.

ಹನೂರು :  ತಾಲ್ಲೂಕಿನ ಪಿ.ಜಿ.ಪಾಳ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ 2026–27ನೇ ಸಾಲಿನ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಬೆಳೆ ಸಾಲ ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಎಂ.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಹಾಗೂ ಕೆ.ಸಿ.ಸಿ. ಸದಸ್ಯರಾದ ಶ್ರೀ ಆರ್. ನರೇಂದ್ರ ಅವರ ನಾಯಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಒಟ್ಟು 36 ಅರ್ಹ ರೈತ ಫಲಾನುಭವಿಗಳಿಗೆ ₹30 ಲಕ್ಷ ಮೊತ್ತದ ಬೆಳೆ ಸಾಲದ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.

ಸಾಲದ ಪತ್ರ ವಿತರಿಸಿ ಮಾತನಾಡಿದ ಮುಖಂಡರು, "ರೈತರ ಆರ್ಥಿಕ ಅಭಿವೃದ್ಧಿಯೇ ನಮ್ಮ ಮುಖ್ಯ ಆದ್ಯತೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ನೀಡುವುದರಿಂದ ರೈತರಿಗೆ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ರೈತರು ಈ ಸಾಲದ ಮೊತ್ತವನ್ನು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಉತ್ತಮ ಇಳುವರಿ ಹಾಗೂ ಪ್ರಗತಿ ಕಾಣಬೇಕು" ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಸ್ಥಳೀಯ ಜನಪ್ರತಿನಿಧಿಗಳು, ರೈತ ಬಾಂಧವರು ಹಾಗೂ ಫಲಾನುಭವಿಗಳು ಹಾಜರಿದ್ದರು.