ನಾಗಮಂಗಲ. ಜು -22 ಮತದಾರರ ಪರಿಸ್ಕರಣ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚು ಶ್ರಮವಹಿಸಿ ಗುರಿ ಸಾಧಿಸುವಂತೆ ಮಂಡ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ನಂದಿನಿ ರವರು ಕರೆ ನೀಡಿದರು.
ನಾಗಮಂಗಲದ ಸ್ವಿಪ್ ಸಮಿತಿ ವತಿಯಿಂದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅವರು, ನಾಗಮಂಗಲ ತಾಲೂಕಿನಲ್ಲಿ ಮತದಾರರ ನೋಂದಣಿ ಕೆಲಸಗಳು ಶೇಕಡ 80 ರಿಂದ 85 ಭಾಗದವರೆಗೆ ಪ್ರಗತಿ ಸಾಧಿಸಿರುವುದು ಗಮನಾರ್ಹ ಸಾಧನೆ ಯಾಗಿರುತ್ತದೆ. ಇನ್ನು ಕೊನೆಯಲ್ಲಿ ಉಳಿಯುವಂತಹ 10 ರಿಂದ 15% ಮತದಾರರನ್ನು ಗುರುತಿಸುವಿಕೆ ಒಂದು ಚಾಲೆಂಜಿಂಗ್ ಆಗಿದ್ದು, ಮತದಾರರು ಬೇರೆ ಬೇರೆ ಕಡೆ ಹೋಗಿರುವುದರಿಂದ ಅವರನ್ನು ಸ್ಥಳೀಯವಾಗಿರುವ ಬಿಎಲ್ಎಗಳಿಂದ, ವಾಸದ ಮನೆಯವರಿಂದ ಗುರುತಿಸಿ ಅವರೆಲ್ಲರೂ ಸಹ ನೊಂದಣಿ ಮಾಡಿಸುವಂತ ಕೆಲಸವನ್ನು ಮಾಡಿಸುವಂತೆ ತಿಳಿಸಿದರು.
ಪ್ರತಿ ತಾಲೂಕುಗಳಲ್ಲಿಯೂ ಸಹ ಎಸ್ ಐ ಆರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಒಂದು ವಿನೂತನ ಕಾರ್ಯಕ್ರಮವನ್ನು ಜಾಗೃತಿ ಕಾರ್ಯಕ್ರಮವಾಗಿ ಮಾಡಬೇಕೆಂದು ನಿರೀಕ್ಷಿಸಿದ್ದು, ನಾಗಮಂಗಲ ತಾಲೂಕಿನಲ್ಲಿ ವಿಶೇಷವಾಗಿ ಕಾರ್ಯಕ್ರಮ ಮಾಡಲಾಗಿದ್ದು , ಇಲ್ಲಿ ವಿಶೇಷ ಚೇತನರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಎಲ್ಲಾ ಇಲಾಖೆಯವರು ಒಟ್ಟಿಗೆ ಸೇರಿ ಮಾಡಿರುವಂತಹದ್ದು ಒಂದು ಗಮನರ್ಹವಾದ ಜಾಗೃತಿ ಕಾರ್ಯಕ್ರಮವಾಗಿದೆ .
ನಾಗಮಂಗಲ ಜಿಲ್ಲಾ ಕೇಂದ್ರದಿಂದ ದೂರದ ಪ್ರದೇಶವಾದರೂ ಅಭಿವೃದ್ಧಿ ಕೆಲಸಗಳಲ್ಲಿ ಗಮನಾರ್ಹವಾದ ಸಾಧನೆಯನ್ನ ಮಾಡುತ್ತದೆ ಎಂಬುದು ಇಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಬಿ ಎಲ್ ಓ ಗಳಾಗಿ ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಹಾಗೂ ಅಂಗನವಾಡಿ ಕಾರ್ಯಕರ್ತರುಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಅರಿವನ್ನು ಮೂಡಿಸುತ್ತಿರುವುದು ಸಂತಸದ ಸಂಗತಿ, ಇದೇ ರೀತಿ ಮತದಾರರ ಗುರುತಿಸುವಿಕೆಯಲ್ಲಿಯೂ ಸಹ ಸ್ಥಳೀಯವಾಗಿರುವಂತಹ ಜನಗಳ ಸಹಕಾರವನ್ನು ಪಡೆಯುವಂತೆ ತಿಳಿಸಿದವರು. ಎಸ್ಐಆರ್ ಪ್ರಕ್ರಿಯೆಯು ಹೆಚ್ಚುವರಿ ಮುಂದುವರೆದಿದ್ದು ಆಗಸ್ಟ್ 8ರವರೆಗೆ ನಡೆಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗುರಿಯತ್ತ ಸಾಗುವಂತೆ ಎಲ್ಲರಿಗೂ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಹಿ ಸಂಗ್ರಹ ಕಾರ್ಯಕ್ರಮವನ್ನು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಹಿ ಮಾಡುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
