ಕಲಘಟಗಿ, ಜು.20: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ–2026 ಕಾರ್ಯದಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ.
ಕ್ಷೇತ್ರದ 2,03,567 ಮತದಾರರಿಗೆ ಎಣಿಕೆ (Enumeration Forms) ವಿತರಿಸಲಾಗಿದ್ದು, ಎಲ್ಲ ನಮೂನೆಗಳೂ
ವಿತರಣೆಗೊಂಡಿವೆ. ಇದರಲ್ಲಿ 1,38,693 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಶೇ.68.62ರಷ್ಟು ಕಾರ್ಯ ಪೂರ್ಣಗೊಂಡಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, 1,128 ಮೃತ ಮತದಾರರು, 812 ಶಾಶ್ವತವಾಗಿ ಸ್ಥಳಾಂತರಗೊಂಡವರು, 482 ಈಗಾಗಲೇ ನೋಂದಾಯಿತರಾದವರು, 66 ಪತ್ತೆಯಾಗದ ಮತದಾರರು ಹಾಗೂ ಇತರೆ 4 ಪ್ರಕರಣಗಳು ಗುರುತಿಸಲಾಗಿದೆ.
ಮನೆ ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳು (BLOs) ಉಳಿದಿರುವ ನಮೂನೆಗಳನ್ನು ಶೀಘ್ರದಲ್ಲಿ ಸಂಗ್ರಹಿಸಿ ಡಿಜಿಟಲೀಕರಣ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ತಮ್ಮ ಮತದಾರರ ಮಾಹಿತಿಯನ್ನು ಸರಿಯಾಗಿ ದಾಖಲಿಸಲು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ
✍️. ವರದಿ: ಮಾರುತಿ ಲಮಾಣಿ
