ಕೊಳ್ಳೇಗಾಲ. ಸರ್ಕಾರಿ ಆದರ್ಶ ವಿದ್ಯಾಲಯ 2026-27 ನೇ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್.ಎಸ್, ಉಪಾಧ್ಯಕ್ಷರಾಗಿ ನಂದಿನಿ.ಎನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಮುಡಿಗುಂಡ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಂದು ನೂತನ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಶಾಲೆಯ ವತಿಯಿಂದ ಹಾರ, ಶಾಲು ಹೊದಿಸಿ ಸನ್ಮಾನಿಸಿದರು.
ಎರಡನೇ ಬಾರಿ ಅಧ್ಯಕ್ಷರಾಗಿ ಪ್ರಕಾಶ್.ಎಸ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಂದಿನಿ.ಎನ್ ಸದಸ್ಯರುಗಳಾಗಿ ವೀರೇಂದ್ರ ಗಿರೀಶ್, ಅಂತೋಣಿ ರಾಜ್.ಟಿ, ಲಿಂಗರಾಜು.ಸಿ, ರಾಜೇಶ್ ನಾಯಕ, ಪರಶಿವ.ಆರ್, ಯೋಗೇಶ್.ವೈ.ಎನ್, ಸೋಮಣ್ಣ, ಅಂಜಲಿ ಕುಮಾರ್, ತ್ರಿಪುರ ಸುಂದರಿ ಶಂಕರಿ.ಎಸ್, ಲತಾ, ಸುಷ್ಮಾ.ಎನ್, ಕವಿತಾ, ಭಾರತಿ, ರಾಧ, ಮಮತಪ್ರೀಯ, ನಾಮನಿರ್ದೇಶಿತ ಸದಸ್ಯರು ಸುರೇಶ್ ರವರು ಆಯ್ಕೆಯಾಗಿದ್ದಾರೆ.
ಬಳಿಕ ಅಧ್ಯಕ್ಷರು ಪ್ರಕಾಶ್ ಮಾತನಾಡಿ, ಆದರ್ಶ ವಿದ್ಯಾಲಯದ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಪೋಷಕರ ಸಹಕಾರದೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಎಸ್.ಡಿ.ಎಂ.ಸಿ ಸದಸ್ಯರ ಜೊತೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ಪ್ರಿಯದರ್ಶಿನಿ ಹಾಗೂ ಸಹಶಿಕ್ಷಕರು ಪೋಷಕರು, ಮಕ್ಕಳು ಇದ್ದರು.
