ಕಲಘಟಗಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ಮುತಪಟ್ಟಿ (ಬಿಪಿಎಲ್) ಕುಟುಂಬಗಳ ಪಟ್ಟಿಯ ಪರಿಶೀಲನೆ 2026ರ ಕುರಿತ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾಲೂಕು ದಂಡಾಧಿಕಾರಿ, ರಾಜಸ್ವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಗೀತಾ ಸಿದ್ದಿ, ತಾಲೂಕು ದಂಡಾಧಿಕಾರಿ ಬಸವರಾಜ ಹೊನ್ನಾವರ, ಗೀತಾ ಹಾಲಗಿ, ಸುರೇಶ್ ಕಡಗಿ, ಧ್ರುವ ಹೊನ್ನಳ್ಳಿ, ಶೇಖರ್ ಗರಗ, ರಾಜಶೇಖರ ಡೊಂಬರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
✍️ ವರದಿ : ಮಾರುತಿ ಲಮಾಣಿ
