Ticker

6/recent/ticker-posts

ಸಂಸದರಾದ ಸುನಿಲ್ ಬೋಸ್ ಪಿಎಂ ಶ್ರೀ ಆದರ್ಶ ಸರ್ಕಾರಿ ಶಾಲೆಗೆ ಭೇಟಿ

ಕೊಳ್ಳೇಗಾಲ.ಜು:- ಸಂಸದ ಸುನೀಲ್ ಬೋಸ್ ರವರ  ಕೊಳ್ಳೇಗಾಲ ಭೇಟಿ ಹಿನ್ನಲೆ ಮುಡಿಗುಂಡ ಪಿ ಎಂ ಶ್ರೀ ಆದರ್ಶ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. 

ಈ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಸ್. ಡಿ. ಎಂ.ಸಿ ಅಧ್ಯಕ್ಷರಾದ ಎಸ್ ಪ್ರಕಾಶ್ ರವರು ಹಾಗೂ ಮುಖ್ಯ ಶಿಕ್ಷಕಿ ಆರ್. ಪ್ರಿಯದರ್ಶಿನಿರವರು ಶಾಲೆಯ ಅಭಿವೃದ್ಧಿಗೆ ಸೈಕಲ್ ಸ್ಟಾಂಡ್, ಬಾಸ್ಕೆಟ್ ಬಾಲ್ ಕೋರ್ಟ್ ನ್ನು ಸಂಸದರ ಅನುದಾನದಲ್ಲಿ ನೀಡಿ ಎಂದು ಮನವಿ ಮಾಡಿ, ಶಾಲೆಯ ಆಸ್ತಿ ಹಸ್ತಾಂತರ ಕುರಿತು ವಿಷಯ ತಿಳಿಸಿದರು. 

 ಆದರ್ಶ ಶಾಲೆಯ ವಿದ್ಯಾರ್ಥಿನಿ ಜೀವಿತ ಅಂತರಾಷ್ಟ್ರೀಯ ಮಿಕ್ಸರ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ನೇಪಾಳಕ್ಕೆ ತೆರಳುತ್ತಿರುವ ಬಾಲಕಿಗೆ ಖರ್ಚು ವೆಚ್ಚಗಳಿಗೆ ಸಹಾಯಧನ ಕೋರಲಾಯಿತು. 

 ಸಂಸದರಿಗೆ ಶಾಲೆಯ ಪರವಾಗಿ ಶಾಲು ಹಾರ ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಡಿ ಎಮ್ ಸಿ ಸದಸ್ಯರುಗಳಾದ ಲಿಂಗರಾಜು, ಸೋಮಣ್ಣ, ಅಂತೋನಿ ರಾಜ್, ಪರಶಿವ, ಯೋಗೀಶ್,ಸುರೇಶ್,ಮಾಜಿ ನಗರ ಸಭಾ ಅಧ್ಯಕ್ಷರಾದ ರೇಖಾ ರಮೇಶ್,  ಎಸ್. ರಮೇಶ್, ಟಿಪಿ ಬಸವಣ್ಣ, ಮುಡಿಗುಂಡ ಶಾಂತರಾಜ್, ಮೂರ್ತಿ,ಶಿವು (ಕಬಾಲಿ),ಪುಟ್ಟಮಾದಯ್ಯ ಶರತ್,ಕಿಜರ್,  ಹಾಗೂ ಸಂಸದರ ಅಭಿಮಾನಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.