ಕಲಘಟಗಿ, ಜು. 21:ಕಲಘಟಗಿ ಉಪವಿಭಾಗದಲ್ಲಿ ಕಂದಾಯ ಇಲಾಖೆಯ ವಿವಿಧ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟು 2,03,567 ಹಳೆಯ ಕಂದಾಯ ದಾಖಲೆಗಳಲ್ಲಿ ಇದುವರೆಗೆ 2,00,597 ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು
ಕಲಘಟಗಿ ಉಪವಿಭಾಗಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಳಿದ ದಾಖಲೆಗಳ ಡಿಜಿಟಲೀಕರಣ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಡಿಜಿಟಲೀಕರಣದಿಂದ ಭೂ ದಾಖಲೆಗಳ ಸಂರಕ್ಷಣೆ ಸುಲಭವಾಗುವುದರ ಜೊತೆಗೆ ಸಾರ್ವಜನಿಕರಿಗೆ ದಾಖಲೆಗಳನ್ನು ತ್ವರಿತವಾಗಿ ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಉಪವಿಭಾಗದ ವ್ಯಾಪ್ತಿಯಲ್ಲಿ UEP (Uttara E-Property) ಹಾಗೂ Cadastral Enumeration Form ಸಂಬಂಧಿಸಿದ ಸಮೀಕ್ಷಾ ಕಾರ್ಯವೂ ನಡೆಯುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಇಲಾಖೆಯ ವಿವಿಧ ಯೋಜನೆಗಳು ಹಾಗೂ ಪ್ರಗತಿ ಕುರಿತು ವಿವರಗಳನ್ನು ನೀಡಿದರು.
✍️. ವರದಿ: ಮಾರುತಿ ಲಮಾಣಿ
