ಕೊಳ್ಳೇಗಾಲ. ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್.ಮಹೇಶ್ ರವರ 70 ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಪಟ್ಟಣದ ಮದ್ದೇವಲ ಮಹರ್ಷಿ ವೃತ್ತದ ಬಳಿ ಅವರ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಮಹೇಶ್ ರವರು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರು ನಿರಂಜನ್ ಕುಮಾರ್ ಮಾತನಾಡಿ, ರಾಜ್ಯದ ಉಪಾಧ್ಯಕ್ಷರಾಗಿ ಮಹೇಶ್ ರವರು ರಾಜ್ಯಾದ್ಯಂತ ಸುತ್ತಾಡುವ ಮೂಲಕ ಸಂಘಟನೆ ಮಾಡುತ್ತಿದ್ದಾರೆ. ಪೂರ್ತಿ ಪ್ರಮಾಣವಾಗಿ ಸಂಘಟನೆಗೆ ತೊಡಗಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತರಲು ಶ್ರಮಿಸುತ್ತಿದ್ದಾರೆ. ಇವರ ಕಾರ್ಯವೈಖರಿ ನೋಡಿ
ಎನ್.ಮಹೇಶ್ ರವರಿಗೆ ರಾಜ್ಯ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ಇರುವುದ್ದರಿಂದ ಇನ್ನೂ ಎರಡು ಮೂರು ತಿಂಗಳಲ್ಲಿ ಮಹೇಶ್ ರವರು ಎಂಎಲ್ಸಿ ಅಧಿಕಾರ ಸೀಗಲಿದೆ ಎಂದು ತಿಳಿಸಿದರು.
ಎನ್.ಮಹೇಶ್ ಮಾತನಾಡಿ, ಎಲ್ಲಾ ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇವರೊಂದಿಗೆ ನಾನು ಸಹಾ ನನ್ನ ಅಭಿಮಾನಿಗಳು ಆಯೋಜಿಸಿದ್ದ ವಿವಿಧ ಕ್ರಾಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಈ ಭಾಗದ ಜನರು ನನಗೆ ಆರ್ಶವಾದ ಮಾಡಿರುವುದ್ದರಿಂದ ನನಗೆ ಹೆಚ್ಚಿನ ಶಕ್ತಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲದ ಜನರ ಕಷ್ಟ ಸುಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಮಾನಸ ಶಿಕ್ಷಣ ಸಂಸ್ಥೆ ಣ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಯುವ ಮುಖಂಡ ನಿಶಾಂತ್, ಗಿರೀಶ್ ಬಾಬು ಸೇರಿದಂತೆ ಅಭಿಮಾನಿಗಳು ಇದ್ದರು.
