ನಾಗಮಂಗಲ .ಜೂ:- 1 ವಿದ್ಯಾರ್ಥಿಗಳ ಶಾಲಾ ಆರಂಭೋತ್ಸವದ ಸಂಭ್ರಮದ ಸಂತಸ ನಿತ್ಯ ನಿರಂತರವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಇರಬೇಕೆಂದು ಶ್ರೀ ರಾಮಾಂಜನೇಯ ಸಂಘದ ಸದಸ್ಯರಾದ ನಾಗರಾಜ್ ರವರು ತಿಳಿಸಿದರು.
ಅವರು ಇಂದು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಹರದನಳ್ಳಿ2026- 27 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಆಂದೋಲನ ಹಾಗೂ ಪೋಷಕರ ಸಹಕಾರದೊಂದಿಗೆ ಟ್ರಾಕ್ಟರ್ ಗಳ ಮೂಲಕ ಮೆರವಣಿಗೆ ದಾಖಲಾತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹಕತೆ ಕೇವಲ ಓದು ಕಲಿಕೆಯಾಗದೆ ನಿತ್ಯ ನಿರಂತರದ ಉತ್ಸಾಹದ ಆರಂಭೋತ್ಸವ ನಿರಂತರವಾಗಿದ್ದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ ಕಲಿಕೆಯ ಹೊಸತನ ಹಾಗೂ ಪೋಷಕರ ಸಹಕಾರಗಳೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಆರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂಗಳ ನೀಡುವುದರ ಮುಖಾಂತರ ಸ್ವಾಗತಿಸಿ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು.
