ನಾಗಮಂಗಲ ಜೂನ್ 1 ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯ ಬೆಳವಣಿಗೆಗೆ ಪೋಷಕರು ಅಧ್ಯಾಪಕರು ವಿದ್ಯಾರ್ಥಿಗಳ ಸಹಕಾರ ಹೊಂದಿದ್ದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಧ್ಯ ಎಂದು ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀಮತಿ ಪುಷ್ಪಾಲತಾ ರವರು ಅಭಿಪ್ರಾಯಪಟ್ಟರು.
ಅವರು ಇಂದು ನಾಗಮಂಗಲ ತಾಲೂಕು ಸರ್ಕಾರಿ ಪ್ರೌಢಶಾಲೆ ಕಾಂತಪುರದಲ್ಲಿ ಇಂದು ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಪಠ್ಯಪುಸ್ತಕದರಣ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲೆ ಅಧ್ಯಾಪಕ ಮನಸ್ಸು ಮಾಡಿದರೆ ಸರ್ವಂಗಿನ ಪ್ರಗತಿ ಸಾಧಿಸಲು ಅಸಾಧ್ಯವೇನಲ್ಲ ಎಂದು ತಮ್ಮ ಉದ್ಘಾಟನಾಡಿಯಲ್ಲಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೋಷಕ ಎಸ್ ಡಿ ಎಂ ಸಿ ಮಹಾಸಭೆ ನಡೆಸಿ ಶಾಲೆಯ ಪ್ರಗತಿಯಲ್ಲಿ ಸಮುದಾಯದ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಧನಂಜಯ್ ರವರು ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಎಂ ಎನ್ ಮಂಜುನಾಥ್ ರವರು ಶಾಲೆಯ ಈ ಶೈಕ್ಷಣಿಕ ವರ್ಷದ ಗುರಿಗಳ ಬಗ್ಗೆ ಅರಿವು ಮೂಡಿಸಿದರು.
ಎಲ್ಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಹಾಗೂ ಎಲ್ಲಾಧ್ಯಾಪಕರು ಉಪಸ್ಥಿತರಿದ್ದ ಶ್ರೀ ಮುರಳಿದರ ನಿರೂಪಣೆ ಮಾಡಿದರು. ಶ್ರೀ ಸೋಮಶೇಖರ್ ಸ್ವಾಗತಿಸಿದರು. ಶ್ರೀಮತಿ ಕೃಪಾ ವಂದಿಸಿದರು.
