Ticker

6/recent/ticker-posts

*ಕೆ ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯ ಮಂತ್ರಿ ನೀಡಲು ಮಹಾಸಭಾ ಒತ್ತಾಯ*

ನಾಗಮಂಗಲ ಮೇ 30 ಕಾಂಗ್ರೆಸ್ ಹಿರಿಯ ಮುಖಂಡ ರಾಧ ಕೆ ಎಚ್ ಮುನಿಯಪ್ಪ ರವರಿಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕರ್ನಾಟಕ ಮಾದರ ಮಹಾಸಭಾ ರಾಜ್ಯ ಸಮಿತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಎನ್ ಆರ್ ಚಂದ್ರಶೇಖರ್ ಒತ್ತಾಯ ಮಾಡಿದ್ದಾರೆ

ಅವರು ಇಂದು ನಾಗಮಂಗಲ ತಾಲೂಕಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಕೋಲಾರ ಲೋಕಸಭೆಯಿಂದ ಸತತವಾಗಿ ಏಳು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ರಾಜ್ಯದ ಆಹಾರ ಸಚಿವರಾಗಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿದ್ದಾರೆ.

30 ವರ್ಷದಿಂದ ಒಳ ಮೀಸಲಿತಿಗಾಗಿ ಬೇಡಿಕೆಯನ್ನು ಸರ್ಕಾರದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೀಸಲಾತಿ ಜಾರಿಗೆ ಮುಂದಾದಾಗ ಎಡಬಲ ಹಾಗೂ 101 ಜಾತಿಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರದ ಪರವಾಗಿ ಹೆಚ್ಚಿನ ಮಟ್ಟದಲ್ಲಿ ಶ್ರಮವಹಿಸಿ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯದ ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಂಡು ಮಾದಿಗ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸದೆ ಸಮ ಸಮಾನತೆಯ ನ್ಯಾಯವನ್ನು ಒದಗಿಸಲು ಆಗ್ರಹವಾಗಿದೆ.

ಮಾದಿಗ ಸಮುದಾಯದ ಹಿರಿಯ ಮುಖಂಡರಾದ ಹಾಗೂ ಕರ್ನಾಟಕ ಮಾದರ ಮಹಾಸಭಾ ರಾಜ್ಯ ಸಂಸ್ಥಾಪಕರು ಅಧ್ಯಕ್ಷರಾದ ಕೆಎಚ್ ಮುನಿಯಪ್ಪ ಅವರಿಗೆ ಅನುಭವ ಆಧಾರದ ಮೇಲೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ರಾಜ್ಯದ ಸಮುದಾಯದ ಪರವಾಗಿ ಒತ್ತಾಯ ಮಾಡಿದ್ದಾರೆ.

ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾದ ಡಿ.ಪಿ ರಂಜಿತ್ ಅಖಿಲ ಕರ್ನಾಟಕ ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಬಿ ನರಸಿಂಹಮೂರ್ತಿ.ಮಾದರ ಮಹಾಸಭಾ ತಾಲೂಕು ಉಪಾಧ್ಯಕ್ಷರಾದ ಸ್ವಾಮಿ ಪ್ರಧಾನ ಕಾರ್ಯದರ್ಶಿ ತಿಮ್ಮರಾಜು ಡಿ.ಟಿ.ಖಜಾಂಚಿ ಚೇತನ್ ಶ್ರೀನಿವಾಸ್. ಹಾಗೂ ಮಾಜಿ ಭೂ ನ್ಯಾಯ ಮಂಡಳಿ ಸದಸ್ಯರಾದ ಹೊoಬಯ್ಯ ಜಿಲ್ಲಾ ಮಾದರ ಮಹಾಸಭಾ ಸದಸ್ಯರಾದ ಇಜ್ಜಲಘಟ್ಟದ ಕೃಷ್ಣ. ಎಸ್ ಎಂ ಶೇಖರ್ ಹನುಮಯ್ಯ ರವರುಗಳು ಉಪಸ್ಥಿತರಿದ್ದರು.