ನಾಗಮಂಗಲ. ಜೂ:- 1 ಜನಪ್ರಿಯ ಶಾಸಕರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಅವರ ಹುಟ್ಟುಹಬ್ಬವಾಗಿ ನಾಗಮಂಗಲ ಕಾಂಗ್ರೆಸ್ ವತಿಯಿಂದ ಸೌಮ್ಯ ಕೇಶವ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ರವರ ಸಾರಥ್ಯ ದಲ್ಲಿ ಜರುಗಿತು.
ನಾಗಮಂಗಲ ತಾಲೂಕಿನ ಜನಪ್ರಿಯ ಶಾಸಕರು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಜಿಲ್ಲೆ ತಾಲೂಕು ಹಾಗೂ ರಾಜ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದು ಅವರ ಹುಟ್ಟು ಹಬ್ಬದ ಅಂಗವಾಗಿ ರಾಜ್ಯಕ್ಕೆ ತಾಲೂಕು ಜಿಲ್ಲೆಗೆ ಇನ್ನು ಹೆಚ್ಚು ಸೇವೆ ಮುಂದುವರೆಯಲು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಅವರ ಹೆಸರಿನಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿತು.
ಹುಟ್ಟು ಹಬ್ಬದ ಅಂಗವಾಗಿ ಟಿ ಮರಿಯಪ್ಪ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಸಿಹಿ ನೀಡಲಾಯಿತು ನಂತರ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೂ ಹಣ್ಣು ಹಂಪಲ ವಿತರಣೆ ಮಾಡಲಾಯಿತು.
