Ticker

6/recent/ticker-posts

ಅಗಲಗುರ್ಕಿ ಬಿಜಿಎಸ್ ಶಾಲಾ ಕಾಲೇಜು ಆವರಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಶಾಲೆಗಳಲ್ಲಿ *ಪ್ರಥಮ ರ್‍ಯಾಂಕ್ ಪಡೆದ 35 ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪುರಸ್ಕಾರ


ಚಿಕ್ಕಬಳ್ಳಾಪುರ ಅಗಲಗುರ್ಕಿ ಬಿಜಿಎಸ್ ಶಾಲಾ ಕಾಲೇಜು ಆವರಣದಲ್ಲಿ  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ  ಶಾಲೆಗಳಲ್ಲಿ *ಪ್ರಥಮ ರ್‍ಯಾಂಕ್ ಪಡೆದ 35 ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ   ಪುರಸ್ಕಾರ ಮತ್ತು ಟ್ಯಾಬ್ ವಿತರಣಾ* 

ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ *ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ ಸಿ ನಾಗೇಶ್ ರವರು*, ಪೂಜ್ಯ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಗಳವರು, ಪೂಜ್ಯ ಶ್ರೀ ಮಂಗಳನಾಥ ಸ್ವಾಮೀಜಿ ಗಳವರು, ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿ ಗಳವರು, ನಿರ್ದೇಶಕರು  ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ಶ್ರೀ  ಜಯರಾಮ ರೆಡ್ಡಿ ಯವರು, ಡಾ. ಎನ್ ಶಿವರಾಮರೆಡ್ಡಿ ಅವರು, ಡಾ. ಶಿವರಾಮ್ ರವರು, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರುಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ *ರ್‍ಯಾಂಕ್  ಪಡೆದ 35 ವಿದ್ಯಾರ್ಥಿಗಳಿಗೆ ಪೂಜ್ಯ ಮಹಾ ಸ್ವಾಮೀಜಿಯವರು ಟ್ಯಾಬ್ ನೀಡಿ  ಗೌರವಿಸಿ ಆಶೀರ್ವದಿಸಿದರು*.