Ticker

6/recent/ticker-posts

ಸೋಂಕಿತರಿಗೆ ಕೋವಿಡ್ ಮೆಡಿಸಿನ್ ಕಿಟ್ ಗಳನ್ನು ವಿತರಣೆ

 ಶ್ರೀಮಠದ ವತಿಯಿಂದ ಕೋವಿಡ್ ಸೋಂಕಿತರಿಗೆ  ಕೋವಿಡ್ ಮೆಡಿಸಿನ್ ಕಿಟ್ ಗಳನ್ನು ವಿತರಿಸಲು ಪೂಜ್ಯ ಮಹಾಸ್ವಾಮಿಜಿಗಳವರು ಜಿಲ್ಲಾಧಿಕಾರಿಗಳಿಗೆ  ಹಸ್ತಾಂತರಿಸಿದರು*.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ವತಿಯಿಂದ,   *ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿರುವಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ60 ಹಾಸಿಗೆಗಳ ಕೊರೊನಾ ಕೇರ್ ಸೆಂಟರ್*  ನಿರ್ಮಿಸಲಾಗಿದ್ದು,

 ಇಂದು  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು* ಉದ್ಘಾಟಿಸಿದರು. 

ಗ್ರಾಮೀಣ  ಭಾಗದ ಜನರಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಕೊರೊನಾ ಚಿಕಿತ್ಸೆ ದೊರೆಯಬೇಕು, ಸೋಂಕು ಬಂದಂತವರು ಯಾರು ಭಯ ಭೀತಿಗೊಳಗಾಗದೆ ಸಕಾಲದಲ್ಲಿ ವೈಧ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು, ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಶ್ರೀ ಮಠ ಸಂಪೂರ್ಣ ಸಹಕಾರ ನೀಡುತ್ತೇವೆ* ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು* ತಿಳಿಸಿದರು.

 ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಮಂಗಳನಾಥ  ಸ್ವಾಮೀಜಿಯವರು ಹಾಗೂ ಜಿಲ್ಲಾಧಿಕಾರಿಗಳಾದ ಆರ್ ಲತಾ ರವರು,  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ ಕೆ ಮಿಥುನ್ ಕುಮಾರ್ ರವರು, ಜಿಲ್ಲಾ  ಆರೋಗ್ಯಾಧಿಕಾರಿ  ಡಾ.  ಇಂದಿರಾ ಕಬಾಡೆ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.