ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ಗ್ರಾನೈಟ್ ಕೈಗಾರಿಕೆ ಉದ್ಘಾಟಿಸಬೇಕೆಂದು ಗ್ರಾಮದ ಯುವಕರು ಮಹಿಳೆಯರು ಸೇರಿ ಸೋಮೇನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಗೆ ಮನವಿ ಸಲ್ಲಿಸಿದರು.
ಕೆಲವು ಕಿಡಿಗೇಡಿಗಳು ಕೈಗಾರಿಕೆ ಮಾಲೀಕನ ಹತ್ತಿರ ಹಣದ ಬೇಡಿಕೆ ಇಟ್ಟಿದ್ದು ಮಾಲಿಕ ಹಣ ಕೊಡದೆ ಇರುವ ಕಾರಣ ಕೈಗಾರಿಕೆ ಉದ್ಘಾಟಿಸಬಾರದೆಂದು ಅಡ್ಡಿ ಪಡಿಸುತ್ತಿದ್ದಾರೆ ಅವರಿಗೆ ಸ್ಥಳೀಯರ ಉದ್ಯೋಗಕ್ಕಿಂತ ಹಣದ ಆಸೆ ಹೆಚ್ಚಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಈಶ್ವರ್ ಮಾತನಾಡಿ ಗ್ರಾನೈಟ್ ಕೈಗಾರಿಕೆಯಿಂದ ನಮ್ಮ ಗ್ರಾಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.
ಕೈಗಾರಿಕೆಗೆ ಬೇರೆ ಕಡೆಯಿಂದ ಕಲ್ಲನ್ನು ತಂದು ನೀರಿನ ಮೂಲಕ ವಿಂಗಡಿಸಿ ಗ್ರಾನೈಟ್ ರಫ್ತು ಮಾಡುತ್ತಾರೆ ಅದರಿಂದ ನಮಗೆ ಯಾವುದೇ ತೊಂದರೆ ಅಥವಾ ಹಾನಿಯಾಗುವುದಿಲ್ಲ ಕೈಗಾರಿಕೆಯಿಂದ ನಿರುದ್ಯೋಗ ಯುವಕರಿಗೆ ನಮ್ಮ ಗ್ರಾಮದಲ್ಲಿ ಉದ್ಯೋಗಸಿಗುತ್ತದೆ.
ಇದೇ ಸಂದಭದಲ್ಲಿ ಶ್ರೀನಿವಾಸ.ಒ ಉಪಾಧ್ಯಕ್ಷರು ಸಯ್ಯದ್ ಬಾಷಾ,ಸದಸ್ಯರು ವೇಣುಗೋಪಾಲ್ ,ಶ್ರೀನಿವಾಸ್ ರೆಡ್ಡಿ ಎಸ್.ಜಿ.ಚೆನ್ನರಾಯಪ್ಪ,ಶಬ್ಬೀರ್,ಆದಿಲ್ ಸಾಬ್,ಮಸ್ತಾನ್ ಸಾಬ್,ಹಾಗೂ ಸ್ಥಳೀಯ ಮಹಿಳೆಯರು.

